ಬೆಂಗಳೂರು, ಆಗಸ್ಟ್ 14 : 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ರಾಷ್ಟ್ರಪತಿಯರವರ ಪೊಲೀಸ್ ವಿಶಿಷ್ಟ ಸೇವಾ ಪದಕ ಮತ್ತು ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರಿನ ಕೆಎಲ್ಎ ಸ್ಟೇಷನ್ನ ಎಸ್.ಪಿ. ಎಸ್. ಬದರೀನಾಥ್ ರಾಷ್ಟ್ರಪತಿಯರವರ ಪೊಲೀಸ್ ವಿಶಿಷ್ಟ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ರಾಜ್ಯ ಗುಪ್ತವಾರ್ತೆಯ ಐಜಿಪಿ ಮತ್ತು ಜಂಟಿ ನಿರ್ದೇಶಕರಾದ ಡಾ. ಚಂದ್ರÀಗುಪ್ತ, ಬೆಂಗಳೂರಿನ ಐಎಸ್ಡಿಯ ಪೊಲೀಸ್ ಅಧೀಕ್ಷಕ ಕೆ.ಎಂ ಶಾಂತರಾಜು, ಬೆಂಗಳೂರಿನ ಅಪರಾಧ ಪೊಲೀಸ್ ಪ್ರಧಾನ ಕಛೇರಿಯ ಎಐಜಿಪಿ ಶ್ರೀಮತಿ ಕಲಾ ಕೃಷ್ಣಸ್ವಾಮಿ, ಶ್ಲಾಘನೀಯ ಸೇವಾ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರಿನ ಸಿಐಡಿಯ ಎಸ್ಪಿ ಎನ್ ವೆಂಕಟೇಶ್, ಬೆಂಗಳೂರಿನ ಕೆ.ಎಸ್.ಆರ್.ಪಿ, 9ನೇ ಪಡೆ, ಕಮಾಂಡೆಂಟ್ ಡಾ. ರಾಮಕೃಷ್ಣ ಮುದ್ದೇಪಾಲ, ಬೆಂಗಳೂರು ನಗರದ ಕೆ.ಜಿ.ಹಳ್ಳಿ ಉಪ-ವಿಭಾಗದ ಎಸಿಪಿ ಪ್ರಕಾಶ್ ರಾಠೋಡ, ಬೆಂಗಳೂರು ನಗರದ ಮಹದೇವಪುರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಜಿ. ಪ್ರವೀಣ್ ಬಾಬು, ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಬಿ.ಎಸ್. ಸತೀಶ್, ಬೆಂಗಳೂರು ಜಿಲ್ಲೆಯ ನಂದನಗುಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮು, ಬೆಂಗಳೂರು ಬೆಸ್ಕಾಂ ಪೊಲೀಸ್ ಇನ್ಸ್ಪೆಕ್ಟರ್ ಎಡ್ವಿನ್ ಪ್ರದೀಪ್ ಎಸ್, ಬೆಂಗಳೂರು ಎಸ್ಸಿಆರ್ಬಿಯ ಪಿಎಸ್ಐ ಶ್ರೀಮತಿ ಜೆ ಝಾನ್ಸಿರಾಣಿ, ಮಂಗಳೂರು ನಗರದ ಸಿಸಿಬಿಯ ಎಎಸ್ಐ ಸುಜನ ಶೆಟ್ಟಿ ಶ್ಲಾಘನೀಯ ಸೇವಾ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಗದಗದ ಡಿಪಿಓ ಎಆರ್ಎಸ್ಐ ಗುರುರಾಜ ಮಹಾದೇವಪ್ಪ ಬೂದಿಹಾಳ, ಬೆಂಗಳೂರಿನ ಕೆಎಸ್ಆರ್ಪಿಯ 4ನೇ ಪಡೆಯ ಸ್ಪೆಷಲ್ ಆರ್ಹೆಚ್ಸಿ-99 ರಾಕೇಶ್ ಎಂ.ಜೆ, ಕೊಪ್ಪಳದ ಡಿಪಿಓ ಗಣಕಯಂತ್ರ ವಿಭಾಗದ ಹೆಚ್.ಸಿ-91 ಶಮಾಶುದ್ಧೀನ್, ಬೆಂಗಳೂರು ನಗರದ ಐಎಸ್ಡಿಯ ಸಿಹೆಚ್ಸಿ:654 ಶಂಕರ ವೈ, ಕಲಬುರಗಿ ನಗರ ಪೊಲೀಸ್ ಆಯುಕ್ತರವರ ಕಛೇರಿ, ಸಿಹೆಚ್ಸಿ:146 ಅಲಂಕಾರ ರಾಕೇಶ, ಬೆಂಗಳೂರಿನ ಐಎಸ್ಡಿ, ಸಿಹೆಚ್ಸಿ-7709 ರವಿ ಎಲ್ ಶ್ಲಾಘನೀಯ ಸೇವಾ ಪದಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.