ಆರ್.ಡಿ.ಪಾಟೀಲ ಜನ್ಮ ದಿನ ಇಂದು ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ.

Ravikumar Badiger
2 Min Read

ಅಫಜಲಪುರ: 2023 ರ ವಿಧಾನಸಭಾ ಮತಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ಆರ್. ಡಿ. ಪಾಟೀಲ ಅವರ 40 ನೇ ಜನ್ಮ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವು ಇಂದು ಪಟ್ಟಣದ ವಿಜಯಪುರ ರಸ್ತೆ ಜಾಗಿರದಾರ ಪಂಕ್ಷನ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜವಾದಿ ಪಕ್ಷದ ತಾಲ್ಲೂಕು ಅಧ್ಯಕ್ಷ ಬಸುಗೌಡ ಪಾಟೀಲ ತಿಳಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು ಆರ್. ಡಿ.ಪಾಟೀಲರ ಜನ್ಮ ದಿನವನ್ನು ಅವರ ಅಭಿಮಾನಿ ಬಳಗ ಹಾಗೂ ಹಿತೈಷಿಗಳು , ಗೆಳೆಯರ ಬಳಗ ಮತ್ತು ಸಮಾಜವಾದಿ ಪಕ್ಷದ ಕಾರ್ಯಕರ್ತರ ವತಿಯಿಂದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗಿದೆ ಎಂದ ಅವರು ಆರ್.ಡಿ.ಪಾಟೀಲ ಅವರು 2023ರ ವಿಧಾನ ಸಭಾ ಚುನಾವಣೆಯಲ್ಲಿ ಕಡೆಮೆ ಸಮಯ ಸಿಕ್ಕಿದರಿಂದ ಕ್ಷೇತ್ರದ ಮತದಾರರಿಗೆ ಬೇಟಿಯಾಗಲು ಸಮಯ ಸಿಗಲಿಲ್ಲ ಆದರೂ ಅಲ್ಪ ಸಮಯದಲ್ಲಿ ಸಾಧ್ಯವಾದಷ್ಟು ಪಕ್ಷದ ಪ್ರಮುಖ ಪ್ರಚಾರ ಮಾಡಿ ಪ್ರಥಮ ಭಾರಿಗೆ 8 ಸಾವಿರಕ್ಕೂ ಹೆಚ್ಚು ಮತಗಳು ಪಡೆದಿದ್ದಾರೆ ಈ ಹಿನ್ನಲೆ ಅವರ ಜನ್ಮ ದಿನದ ಅಂಗವಾಗಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ ಅವರು ಮುಂಬರುವ ದಿನಗಳಲ್ಲಿ ಆರ್.ಡಿ.ಪಾಟೀಲ ಅವರು ಕ್ಷೇತ್ರ ಸುತ್ತಾಡಿ ಜನರ ಕಷ್ಟ ಸುಖದಲ್ಲಿ ಭಾಗಿಯಾಗಲಿದ್ದಾರೆ ಬಡ ಬಗ್ಗರಿಗೆ ಸ್ಪಂದಿಸಿಲಿದ್ದಾರೆ , ತಾಲೂಕಿನ ಸಮಸ್ಯೆಗಳ ವಿರುದ್ದ ಹೋರಾಟ ಮಾಡಲಿದ್ದಾರೆ , ರಾಜಕೀಯದಲ್ಲಿ ಸೋಲು ಗೆಲವು ಸಹಜ ಅದನ್ನು ಸಮನಾಗಿ ಸ್ವೀಕರಿಸಲಿದ್ದೇವೆ ಎಂದರು.

ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹೀರೂ ರಾಠೋಡ ಮಾತನಾಡಿ ಯುವಕರ ಕಣ್ಮಣಿ, ಸಮಾಜ ಸೇವಕ, ಸರಳ ಸಜ್ಜನಿಕೆ ಉತ್ಸಾಹಿಗಳಾದ ಆರ್.ಡಿ .ಪಾಟೀಲರಾಗಿದ್ದಾರೆ ಅವರ ಜನ್ಮ ದಿನದ ಅಂಗವಾಗಿ ಪಟ್ಟಣದ ವಿ.ಕೆ.ಜಿ.ಅಂಧ ಮಕ್ಕಳ ಶಾಲೆಗೆ ಉಚಿತವಾಗಿ ಪ್ಯಾನ ವಿತರಣೆ ಸೇರಿದಂತೆ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು ಆರ್.ಡಿ.ಪಾಟೀಲ ಮತ್ತು ಅವರ ಸಹೋದರ ಮಹಾಂತೇಶ ಪಾಟೀಲ ಅವರು ಕಳೆದ ಅನೇಕ ವರ್ಷಗಳಿಂದ ತಾಲೂಕಿನಲ್ಲಿ ಸಮಾಜೀಕ ಸೇವೆ ಮಾಡುತ್ತ ಬರುತ್ತಿದ್ದಾರೆ ಹೀಗಾಗಿ ಆರ್.ಡಿ.ಪಾಟೀಲರ ಜನ್ಮ ದಿನ ಈ ಭಾರಿ ಅರ್ಥಪೂರ್ಣವಾಗಿ ಆಚರಿಸಿಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಆರ್.ಡಿ.ಪಿ. ಅಭಿಮಾನಿಗಳು ಆಗಮಿಸಿ ಆರ್.ಡಿ.ಪಾಟೀಲವರಿಗೆ ಶುಭ ಹಾರೈಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಅಂಬಣ್ಣ ನರಗೋದಿ, ಸೈಪನಸಾಹೇಬ ಜಮಾದಾರ, ಹಿರಿಯ ಮುಖಂಡರಾದ ಸಿದ್ದು ಜವಳಿ ಸೇರಿದಂತೆ ಅನೇಕರಿದ್ದರು.

Share This Article