ಶ್ರೀ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಮತ್ತು ಅಫ್ಜಲ್ಪುರ ತಾಲೂಕು ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಶ್ರೀ ಎಲ್ಲಪ್ಪ ಎಸ್ ತಳವಾರ್ ಇವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು. ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಠ್ಠಲ್ ಡಿ ಪಟ್ಟೇದವರು ವಹಿಸಿದರು, ಮುಖ್ಯ ಅತಿಥಿ ಸ್ಥಾನವನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಗಂಗಾಧರ್ ಜಮಾದಾರ್ ರವರು ಹಾಗೂ ಶಾಲೆಯ ಮುಖ್ಯ ಗುರುಗಳಾದ ಮಹಂತೇಶ್ ಹಾಲ್ಗಡ್ಲಿ ಮತ್ತು ಅತಿಥಿಗಳ ಸ್ಥಾನವನ್ನು ಹಿರಿಯ ಶಿಕ್ಷಕರಾದ ಶ್ರೀ ಭೀಮರಾಯ ವಿಜಯಪುರ ವಹಿಸಿದರು. ತಾಲೂಕು ಉತ್ತಮ ಶಿಕ್ಷಕರ ಪ್ರಶಸ್ತಿ ಪಡೆದ ಶ್ರೀ ಯಲ್ಲಪ್ಪ ತಳವಾರ್ ಅವರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗರಿಳಾದ ಶ್ರೀ ಮಾರುತಿ ಮೂರನೆತ್ತಿ, ಮಾರುತಿ ಜಕಬಾ, ಶ್ರೀ ಸಂಗಣ್ಣ ಹಸರಗುಂಡಗಿ, ಬಸವರಾಜ್ ಹೇರೂರ, ಸನ್ಮಾನಿಸಿ ಹರ್ಷ ವ್ಯಕ್ತಪಡಿಸಿದರು.