ಸೆಪ್ಟಂಬರ್ 8, 9 ಮತ್ತು 10 ರಂದು ದಿನ ರೇಕಿ ಚಿಕಿತ್ಸಾ ಶಿಬಿರ-ಎನ್.ರಾಜಾ

Ravikumar Badiger
1 Min Read

ರಾಯಚೂರು ಸೆ.7-ಗುರುದೇವ ಗುರುಕುಲ ವಿದ್ಯಾ ಕೇಂದ್ರ, ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿರ್ಮೂಲ ಸಂಸ್ಥೆ ಹಾಗೂ ಶ್ರೀ ವರಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಸಂಯುಕ್ತತಾಶ್ರಯದಲ್ಲಿ ಸೆಪ್ಟಂಬರ್ 8, 9 ಮತ್ತು 10 ಮೂರು ದಿನಗಳ ಕಾಲ ರೇಕಿ
ಮತ್ತು ಸಮ್ಮೋಹಿನಿ ಜನ್ಮ ಜನ್ಮಾಂತರ ಕಾಯಿಲೆ ಮತ್ತು ಕರ್ಮ ನಿವಾರಣೆ ಗಾಗಿ ಶಿಬಿರ ನಡೆಸಲಾಗುತ್ತದೆ ಎಂದು ಶ್ರೀ ವರಸಿದ್ದಿ ಅಂಜಿನಯ್ಯ ಮೂರು ಸ್ವಾಮಿ ದೇವಸ್ಥಾನ ಅಧ್ಯಕ್ಷರಾದ ಎಂದು ಎನ್.ರಾಜಾ ಶಂಕರ ಹೇಳಿದರು.ಅವರಿಂದು ಸುದ್ಧಿಗೊಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಶಾಲಾ ಮಕ್ಕಳಿಗೆ
ಉಚಿತವಾಗಿ ರೇಕಿ ಹಾಗೂ ಸಮ್ಮೋಹಿನಿ ಜನ್ಮ ಜನ್ಮಾಂತರ ಶಿಬಿರವನ್ನು ನಡೆಸಲಾಗುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ರೇಕಿ ಮತ್ತು ಸಮ್ಮೋ ಹಿನಿ ಜನ್ಮಜನ್ಮಾಂತರ ಚಿಕಿತ್ಸೆ ಮೂಲಕ ಪರಿಹಾರ ಒದಗಿಸಲಾಗುತ್ತದೆ ನಗರದ ಮದರ್ ಟ್ರಸ್ಟ್ ಶಾಲೆಯಲ್ಲಿ ದಿನದ ಈ ಶಿಬಿರ ಏರ್ಪಡಿಸಲಾಗಿದೆ.

Share This Article