*ಅಖಿಲ ಕರ್ನಾಟಕ 108 ಅಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ಮಾಸಿಕ ಸಭೆ*
ಅಖಿಲ ಕರ್ನಾಟಕ 108 ಅಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ವತಿಯಿಂದ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಮಾಸಿಕ ಸಭೆ ನಡೆಯಿತು.
ಹಲವಾರು ವಿಚಾರಗಳ ಬಗ್ಗೆ ರಾಜ್ಯ ಕಮಿಟಿಯ ಅಧ್ಯಕ್ಷರು ಪದಾಧಿಕಾರಿಗಳಿಗೂ ಸರ್ವ ಸದಸ್ಯರಿಗೂ ಮಾಹಿತಿ ನೀಡಿ ಸಂಬಳ ಹಾಗೂ ವಿಳಂಬದ ಬಗ್ಗೆ ಕೂಲಂಕುಷವಾಗಿ ಚರ್ಚಿಸಲಾಯಿತು
ಸಂಘವು ಕಾನೂನು ರೀತಿಯಲ್ಲಿ ನಡೆಯುತ್ತಿದ್ದು. ಅದಕ್ಕೆ ಸರ್ವ ಸದಸ್ಯರ ಬೆಂಬಲ ಅತ್ಯಗತ್ಯ
ಎನ್ನುವ ವಿಚಾರವನ್ನು ನಾವೆಲ್ಲರೂ ನಂಬಿಕೆ ಇಟ್ಟು ಸಂಗದ ಜೊತೆ ಕೈಜೋಡಿಸಬೇಕು ಎಂದು ಅಖಿಲ ಕರ್ನಾಟಕ 108 ಅಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ರಾಜ್ಯದ್ಯಕ್ಷರು ಮಲ್ಲಿಕಾರ್ಜುನ ಪಿ ಮಾತನಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ 108 ಅಂಬ್ಯುಲೆನ್ಸ್ ನೌಕರರ ಹಿತರಕ್ಷಣಾ ಸಂಘದ ರಾಜ್ಯದ್ಯಕ್ಷರು ಮಲ್ಲಿಕಾರ್ಜುನ,ಪಿ. ಯಾದಗಿರಿ ಜಿಲ್ಲಾಧ್ಯಕ್ಷರು ಸುದರ್ಶನ. ಯಾದಗಿರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಲಾಲ್ ಸಾಬ್ ಮುಲ್ಲಾ . ಹಾಗೂ ಮಂಜುನಾಥ ಪ್ರಸಾದ. ಸಂಘದ ಹಲವಾರು ಪದಾಧಿಕಾರಿಗಳು ಭಾಗಿಯಾಗಿದ್ದರು
*ನಾಗರಾಜ ಬಿ ಅಣಿಬಿ ಜೆ.ಕೆ ನ್ಯೂಸ್ ಕನ್ನಡ ಯಾದಗಿರ*