ದೋರನಹಳ್ಳಿ ಗ್ರಾಮದಲ್ಲಿ ನಮ್ಮ ಕರ್ನಾಟಕ ಸೇನೆವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು

YDL NEWS
1 Min Read

*ಕನ್ನಡ ಸೇವೆ ಎಲ್ಲರ ಹೋಣೆ -ಶಖಾಪುರ*

 

 ಕನ್ನಡ ನಾಡಿನಲ್ಲಿ ಕನ್ನಡ ನಾಡು ನುಡಿಯ ಸೇವೆ ಎಲ್ಲರ ಹೋಣೆ. ಕನ್ನಡ ಉಳಿಸಿ ಬೆಳೆಸುವ ಸೇವೆ ನಾವೆಲ್ಲರೂ ಕೂಡಿಕೊಂಡು ಮಾಡಿದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಹೇಳಿದರು.

 

 

ದೋರನಹಳ್ಳಿ ಗ್ರಾಮದಲ್ಲಿ ನಮ್ಮ ಕರ್ನಾಟಕ ಸೇನೆವತಿಯಿಂದ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಲಾಯಿತು ಎಂದು ಮಾತನಾಡಿದರು.

 

ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷ ಸಿದ್ದು ಪಟ್ಟೆದಾರ ಮಾತನಾಡಿ ಇಂದು ನಾವು ಅನ್ಯಭಾಷೆಗಳ ಹಾವಳಿಯನ್ನು ತಡೆಗಟ್ಟಿ ಕನ್ನಡ ಭಾಷೆಯನ್ನು ಉಳಿಸುವ ಸಂಕಲ್ಪ ಮಾಡಬೇಕು. ಕನ್ನಡ ನಮ್ಮ ಜೀವಭಾಷೆಯಾಗಿದೆ ಎಂದು ನುಡಿದರು.

 

ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ.ತಾಲೂಕ ಅಧ್ಯಕ್ಷ ಸಿದ್ದು ಪಟೇದಾರ್ ,ಜಿಲ್ಲಾ ಪ್ರಧಾನ ಸಂಚಾಲಕ ಅಂಬರೀಷ್ ತೇಲುಗೂರು ಕಸಾಪ ಅಧ್ಯಕ್ಷ ಮಹೇಶ್ ಪತ್ತಾರ .ಗ್ರಾಮದ ಮುಖಂಡ ಶರಣ್ಣಪ್ಪ ದಿಗ್ಗಿ. ಸದ್ದಾಂ ಹುಸೇನ್,ಅಂಬಣ್ಣ ನಾಟೇಕಾರ್, ಕಿರಣ್ ಗುಂಟ್ನೂರ,ಶ್ರೀನಿವಾಸ್, ಶಂಕರ ಯಾಳವಾರ,ಸಾಬಣ್ಣ ಮಾಲಿ ಪಾಟೀಲ್,ದೇವು ಶಹಾಪುರ. ಭಾಷಾ,ಮಹೇಶ್ ಮೂಲಿ,ಅನಿಲ್,ಮಲ್ಲು ಇಬ್ರಾಂಪುರ್,ರಾಜು, ಅಯ್ಯಪ್ಪ ದೊರೆ,ರವಿ ಗುತ್ತದಾರ, ದತ್ತಪ್ಪ ಕಸೆಟ್ಟಿ,ಮರಿಲಿಂಗ ಕೌದಿ, ಸಾಬಣ್ಣ ರಂಜನಿಗಿ.ಚಂದ್ರು ಹಲಗಿ ಮುಂತಾದವರಿದ್ದರು.

Share This Article