ಸಿಂದಗಿ ಮಾರ್ಚ 23 : ರಾಜ್ಯ ಕಾಂಗ್ರೇಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣದಲ್ಲಿ ತೊಡಗಿದೆ. ಬಜೆಟ್ ನಲ್ಲಿ ಆ ಸಮುದಾಯಕ್ಕೆ ಹೆಚ್ಚಿಗೆ ಅನುದಾನ ನೀಡಿದ್ದಾರೆ, ಬಹುಸಂಖ್ಯಾತ ಹಿಂದುಳಿಗೆ ಏನೂ ಯೋಜನೆ, ಅನುದಾನ ಇಲ್ಲ, ನಮ್ಮ ದೇವಸ್ಥಾನದ ಪೂಜಾರಿಗಳಿಗೆ 2 ಸಾವಿರ, ಆದರೆ ಇಮಾಮ್ ಗಳಿಗೆ 6 ಸಾವಿರ ಇದು ಯಾವ ನ್ಯಾಯ? ಇದು ತುಷ್ಟಿಕರಣದ ಪರಮಾವಧಿಯಲ್ಲವೇ? ಇನ್ನು ಸರ್ಕಾರಿ ಕಾಮಗಾರಿಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.4% ರಷ್ಟು ಮೀಸಲು ನೀಡಿದ್ದಾರೆ , ರಾಜ್ಯದ ಹಿಂದುಳಿದ ವರ್ಗದವರು ಏನು ಮಾಡಬೇಕು.
ಈ ವಿಜಯಪುರ ಭಾಗಕ್ಕೆ ಬಜೆಟ್ ನಲ್ಲಿ ಯಾವುದೇ ಹೊಸ ಯೋಜನೆ, ಅನುದಾನ ಘೋಷಣೆ ಮಾಡಿಲ್ಲ. ಕಳೆದ ಬಾರಿ ಮಂಡಿಸಿದ ಘೋಷಣೆಗಳು ಜಾರಿ ಮಾಡಿಲ್ಲ, ಈ ಭಾಗದ ಬೃಹತ್ ನೀರಾವರಿ ಯೋಜನೆಯಾದ ಆಲಮಟ್ಟಿ ಜಲಾಶಯ ನೀರು ಜಿಲ್ಲೆಯ ಜನರಿಗೆ, ನೀರಾವರಿಗೆ ಸಮರ್ಪಕ ಬಳಸುವಲ್ಲಿ ವಿಫಲವಾಗಿದೆ. ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದ್ದಾರೆ ಇದು ದುರ್ದೈವದ ಸಂಗತಿಯಾಗಿದೆ .ಇನ್ನು ಈ ಜಿಲ್ಲೆಯಲ್ಲಿ ಮುಳವಾಡ ಏತ ನೀರಾವರಿ, ಉತ್ತರ ಕರ್ನಾಟಕ ಭಾಗದ ಅತಿದೊಡ್ಡ ನೀರಾವರಿ ಯೋಜನೆ ಕೃಷ್ಣಾ ಮೇಲ್ದ0ಡೆ ಯೋಜನೆಗೆ ಈ ಕಾಂಗ್ರೇಸ್ ಸರ್ಕಾರ ಒಂದು ಬಿಡಿಗಾಸು ಕೂಡ ಘೋಷಿಸಿಲ್ಲ. ಈ ಯೋಜನೆ ಬಗ್ಗೆ ಆಸಕ್ತಿಯೇ ಇಲ್ಲ. ಇನ್ನು ಚಿಮ್ಮಲಗಿ ನೀರಾವರಿ ಯೋಜನೆಯು ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲೆಗೆ ಕೈಗಾರಿಕೆಗಳನ್ನು ತಂದು ಈ ಭಾಗದ ಯುವಕರಿಗೆ ಉದ್ಯೋಗ ನೀಡಿಲ್ಲ. ತೊಗರಿ ಬೆಳೆ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ ಕೂಡಲೇ 800 ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ನಾನು ಒತ್ತಾಯ ಮಾಡುತ್ತೇನೆ.
ರಾಜ್ಯದ ಸಚಿವರಿಗೆ, ಶಾಸಕರಿಗೆ ಹನಿಟ್ರ್ಯಾಪ್ ಮಾಡಿದ್ದಾರೆ ಅದನ್ನು ತನಿಖೆ ಮಾಡಿ ಎಂದು ನಮ್ಮ ಶಾಸಕರು ಪ್ರತಿಭಟನೆ ಮಾಡಿದರೆ ನಮ್ಮ ಬಿಜೆಪಿಯ 18 ಜನ ಶಾಸಕರನ್ನು ಅಮಾನತ್ತು ಗೊಳಿಸುತ್ತಾರೆ, ಇದು ವಿಧಾನಸಭಾ ಅಧ್ಯಕ್ಷರ ನಿರ್ಧಾರ ಖಂಡನೀಯ. ಇದು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿ ನಡೆಯಾಗಿದೆ. ಕೂಡಲೇ ಈ ಆದೇಶ ವಾಪಾಸ್ ಪಡೆಯಬೇಕು.
ಇನ್ನು ರಾಜ್ಯದ ದಲಿತ ಸಾವಿರಾರು ಕೋಟಿ ರೂಪಾಯಿ ಅನುದಾನ ದುರ್ಬಳಕೆ ಈ ಸರ್ಕಾರ ಮಾಡಿಕೊಂಡಿದೆ.
ಇತ್ತೀಚೇಗೆ ಸಿಎಂ ಮಂಡಿಸಿರುವ ಬಜೆಟ್ ಸಂಪೂರ್ಣ ಸಾಲಮಯವಾಗಿದೆ , ರಾಜ್ಯದ ಯಾವುದೇ ಅಭಿವೃದ್ಧಿಯ ಬಗ್ಗೆ, ದೂರದೃಷ್ಟಿ ಬಗ್ಗೆ ಯೋಜನೆ ಘೋಷಣೆ ಮಾಡಿಲ್ಲ, ಎಲ್ಲರ ಮೂಗಿಗೆ ತುಪ್ಪ ಸವರಿ , ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವ ಬಜೆಟ್ ಮಂಡನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ರಮೇಶ್ ಭೂಸನೂರು ಅವರು, ಸಿಂಧಗಿ ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಸಂತೋಷ್ ಪಾಟೀಲ್, ಲಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಅಶೋಕ್ ಆಲ್ಲಾಪುರ ಅವರು ಹಾಗೂ ಸ್ಥಳೀಯ ಪಕ್ಷದ ನಾಯಕರು ಉಪಸ್ಥಿತರಿದ್ದರು.