ರಾಯಚೂರು: ಬೆಂಗಳೂರು- ಕಲಬುರಗಿ ವಂದೇ ಭಾರತ ರೈಲು ಸಂಚಾರ ಆರಂಭಿಸಿ ನಿನ್ನೆಗೆ ಒಂದು ವರ್ಷ ಪೂರ್ಣಗೊಳಿಸಿದ್ದು ಶೇ.99 ಪ್ರಯಾಣಿಕರಿಗೆ ಅನುಕೂಲವಾಗಿದ್ದು ಆದಾಯ ತೃಪ್ತಕರವಾಗಿರುವುದಾಗಿ ಮಾಹಿತಿ ದೊರೆತಿದೆ ಎಂದು ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲು ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಅಭಿನಂದನೆ ತಿಳಿಸಿರುವ ಅವರು, ಕಲಬುರಗಿ ಹಾಗೂ ಬೆಂಗಳೂರು ಮಧ್ಯೆ ಸಂಚರಿಸುವ ಏಕೈಕ ರೈಲು ಇದಾಗಿದ್ದು ಇದು ಪ್ರಯಾಣಿಕರಿಗೆ ಇದು ಬಹಳ ಅನುಕೂಲಕರವಾಗಿದ್ದು ಮತ್ತು ಸಮಯವೂ ಅತ್ಯಂತ ಸಮರ್ಪಕವಾಗಿದೆ. ಆದ್ದರಿಂದ ಈ ರೈಲಿನ ಸಮಯ ಬದಲಾವಣೆ ಮಾಡಬಾರದು. ಬೇರೆ ಸಮಯದಲ್ಲಿ ಬೇಕಾದರೆ ಮತ್ತೊಂದು ರೈಲನ್ನು ಹೆಚ್ಚುವರಿವಾಗಿ ಓಡಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.