ಯೂರೋಪ್ : ಮೇ 31, 2025 ರಂದು ಜರ್ಮನಿ ದೇಶದ ಎರ್ಲಾಂಗಾನ್ ನಲ್ಲಿ ಬಸವ ಸಮಿತಿ ಯೂರೋಪ್ ವತಿಯಿಂದ 12ನೇ ಶತಮಾನದ ಸಮಾಜ ಸುಧಾರಕ ಶ್ರೀ ಬಸವಣ್ಣವವರ ಜನ್ಮ ದಿನದ ಸ್ಮರಣಾರ್ಥವಾಗಿ ಮೊಟ ಮೊದಲ ಬಾರಿಗೆ ಬಸವ ಜಯಂತಿಯನ್ನು ಆಯೋಜಿಸಲಾಗುತ್ತಿದೆ ಎಂದು ನೆಲಮಂಗಲದ ವಾಸಿ ರಾಕೇಶ್ ಉಮಾಶಂಕರ್ ಅವರು ತಿಳಿಸಿದ್ದಾರೆ. ಜರ್ಮನಿಯಲ್ಲಿ ವಾಸಿಸುವ ಕನ್ನಡಿಗನಾಗಿ ಹಾಗೂ ಸಂಘದ ಸದಸ್ಯನಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನನಗೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.
ಯೂರೋಪಿನ ಹಲವು ದೇಶಗಳಲ್ಲಿ ನೆಲೆಸಿರುವ ಬಸವ ಭಕ್ತರು ಕಳೆದ ಎರಡು ವರ್ಷಗಳ ನಿರಂತರ ಪ್ರಯತ್ನದಿಂದ ‘ಬಸವ ಸಮಿತಿ ಯೂರೋಪ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ಸಂಸ್ಥೆಯು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ರೀ ಶಂಕರ ಮಹಾದೇವ ಬಿದರಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಹಾಗೂ ಶರಣ ಸಾಹಿತ್ಯ ಚಿಂತಕಿ ಮತ್ತು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ಕಾರ್ಯಕ್ರಮದ ವಿಶೇಷತೆಗಳು:
31 ಮೇ 2025 ರಂದು ಯೂರೋಪಿನ ವಿವಿಧ ದೇಶಗಳಾದ ಬೆಲ್ಜಿಯಂ ನೆದರ್ಲ್ಯಾಂಡ್, ಲಕ್ಸೆಂಬರ್ಗ್, ಇಟಲಿ, ಪೋಲೆಂಡ್, ಆಸ್ಟ್ರಿಯಾ, ಫ್ರಾನ್ಸ್ ಮತ್ತು ಜರ್ಮನಿ ದೇಶದ ಮ್ಯುನಿಕ್, ಮ್ಯಾಗ್ನೆಬುರ್ಗ್, ಫ್ರಾಂಕ್‌ಫರ್ಟ್ ಮುಂತಾದ ನಗರಗಳಲ್ಲಿ ನೆಲೆಸಿರುವ ಕನ್ನಡ ಸಂಘಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿವೆ. ಎಲ್ಲಾ ಸಂಘಗಳ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂಬ ನಂಬಿಕೆ ನಮಗೆ ಇದೆ ಎಂದು ತಿಳಿಸಿದ್ದಾರೆ.
ಈಗಾಗಲೇ 150ಕ್ಕೂ ಹೆಚ್ಚು ಬಸವ ಭಕ್ತರು ಹಾಗೂ ಅವರ ಕುಟುಂಬ ಸದಸ್ಯರು ಪಾಲ್ಗೊಳ್ಳಲು ದೃಢನಿಶ್ಚಯ ವ್ಯಕ್ತಪಡಿಸಿದ್ದು, ಹಲವು ತಂಡಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿವೆ.ಅವುಗಳಲ್ಲಿ ಮ್ಯುನಿಕ್ ಭಾರತೀಯ ರಾಯಭಾರಿ ಕಚೇರಿ, ಆಸ್ಟ್ಯಾಂಡರ್ ಇಂಟಿಗ್ರೇಷನ್ ಬೈರುತ್ ಎರ್ಲಾಂಗಾನ್, ಐಸಿಎಫ್ ತಂಡ, ನಟ್ರಾಸ್ ನಾಟ್ಯ ತಂಡ, ಓಂ ಧೋಲ್ ತಾಶಾ, ಮಾತಂಗಿ ನೃತ್ಯ ತಂಡ, ಚಾಮುಂಡಿ ಸ್ಕೂಲ್ ಆಫ್ ಮ್ಯೂಸಿಕ್ ಹಾಗೂ ಭಾವತರಂಗ ಸಂಗೀತ ತಂಡಗಳು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸುತಿದ್ದಾರೆ ಎಂದರು
ಕಾರ್ಯಕ್ರಮದ ಮುಖ್ಯಾಂಶಗಳು: ಬಸವ ಮೆರವಣಿಗೆ, ಮಕ್ಕಳಿಂದ ವಚನ ಪಠಣ, ಅತಿಥಿಗಳ
ಸನ್ಮಾನ, ಪುಸ್ತಕ ಬಿಡುಗಡೆ, ದಾಸೋಹ ಹಾಗೂ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ. ಸಂಘದ ಸದಸ್ಯರು ಹಾಗೂ ಬಸವ ಭಕ್ತರು ಸ್ವಯಂ ಪ್ರೇರಿತವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು, ಈ ಉತ್ಸವದ ಮಟ್ಟವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದಿದ್ದಾರೆ
ಈ ಸಂಘದ 11 ಮಂದಿ ಕಾರ್ಯನಿರ್ವಹಣಾ ಸಮಿತಿ ಸದಸ್ಯರಾದ ಪಂಚಾಕ್ಷರಿ ಲಕ್ಷ್ಮೀಶ್ವರಮಠ (ಪೋಲೆಂಡ್), ಹೇಮೇಗೌಡ ರುದ್ರಪ್ಪ (ಇಟಲಿ), ನವೀನ ಓದೂಗೌಡ್ರ (ಇಟಲಿ), ಸತೀಶ್ ಪಲೇದ (ಆಸ್ಟ್ರಿಯಾ), ದೀಪಕ್ ಜಗದೀಶ್ ಗೋಶ್ವಾಲ್ (ಬೆಳ್ಳಿಯಂ), ಸಂಜಯ್ ಗೂಢಬನಹಾಳ್ ಪ್ರಸನ್ನಕುಮಾರ್
(ಫ್ರಾನ್ಸ್) ಮತ್ತು ಜರ್ಮನಿಯಿಂದ ವಿಜಯಕುಮಾರ್ ತುಮಕೂರು ಚಿಕ್ಕರುದ್ರಯ್ಯ, ಪ್ರಿಯಾ ಚಂದ್ರಶೇಖರ್, ವೇದ ಕುಮಾರಸ್ವಾಮಿ, ಪ್ರಶಾಂತ ಶಿವನಾಗಣ್ಣ, ಶಶಿಕಾಂತ ಗ.ಗುಡ್ಡದಮಠ ನಿರ್ವಹಣೆ ಮಾಡಿದ್ದಾರೆ