*ನಿವೃತ್ತ ನೌಕರ ಸಿದ್ದಪ್ಪ ಸರ್ ಅವರಿಗೆ ಕೋಲಿ-ಬೆಸ್ತ ಸಮಾಜದಿಂದ ಸನ್ಮಾನ*

YDL NEWS
0 Min Read

ಗಂಗಾವತಿ. ಜುಲೈ.31: ವಯೋ ನಿವೃತ್ತಿ ಹೊಂದಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕೊಪ್ಪಳ ವಿಭಾಗದ ಸಹಾಯಕ ಉಗ್ರಾಣ ಪಾಲಕರಾದ ಸಿದ್ದಪ್ಪ ಇವರನ್ನು ತಾಲೂಕು ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾಸಿ ಗೌರವಿಸಲಾಯಿತು.

ಗಂಗಾವತಿ ತಾಲೂಕು ಕೋಲಿ-ಬೆಸ್ತ ಸಮಾಜದ ಅಧ್ಯಕ್ಷ ಹನುಮೇಶ ಬಟಾರಿ ಅವರು ನಿವೃತ್ತ ನೌಕರ ಸಿದ್ದಪ್ಪ ಅವರಿಗೆ ಶಾಲು ಹೊದಿಸಿ ಫಲ, ಪುಷ್ಪ ನೀಡಿ ಸನ್ಮಾನಿಸಿ, ನಿವೃತ್ತ ಜೀವನ ಸುಖ, ಸಮೃದ್ಧಿ, ನೆಮ್ಮದಿಯಿಂದ ಸಾಗಲಿ ಎಂದು ಶುಭ ಹಾರೈಸಿದರು.

ಈ ವೇಳೆ ಕೋಲಿ-ಬೆಸ್ತ ಸಮಾಜದ ತಾಲೂಕ ಅಧ್ಯಕ್ಷರಾದ ಹನುಮೇಶ ಬಟಾರಿ ಹಾಗೂ ತಾಲ್ಲೂಕ ಮುಖಂಡರು ಮತ್ತು ಗ್ರಾಮದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Share This Article