ಹೆಮ್ಮೆಯ ಕನ್ನಡಿಗ & 92 ವರ್ಷದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಆಘಾತ… HD Deve Gowda

YDL NEWS
2 Min Read

ಹೆಮ್ಮೆಯ ಕನ್ನಡಿಗ, ಭಾರತವನ್ನು ಆಳಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರು ಕೇಳಿದರೆ ಸಾಕು ಇಡೀ ಇಂಡಿಯಾ ಮಾತ್ರವಲ್ಲ ಇಡೀ ಜಗತ್ತೇ ಎದ್ದು ನಿಂತು ಸೆಲ್ಯೂಟ್ ಹೊಡೆಯುತ್ತದೆ. 1 ಜೂನ್ 1996 ಶನಿವಾರ ಭಾರತದ 11ನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಹೆಮ್ಮೆಯ ಕನ್ನಡಿಗ ಎಚ್.ಡಿ. ದೇವೇಗೌಡ ಅವರು ತಮ್ಮ ಕ್ರಾಂತಿಕಾರಿ ನಿರ್ಧಾರಗಳ ಮೂಲಕ ಇಡೀ ಜಗತ್ತಿನಲ್ಲಿ ಹೆಸರು ಮಾಡಿದರು.

 

 

ಈಗಲು ಕೂಡ ಎಚ್.ಡಿ.ದೇವೇಗೌಡರಿಗೆ ಇಡೀ ಇಂಡಿಯಾದ ರಾಜಕಾರಣಿಗಳು ತಲೆಬಾಗಿ ನಮಸ್ಕರಿಸುತ್ತಾರೆ. ಹೀಗಿದ್ದಾಗಲೇ, ಹೆಮ್ಮೆಯ ಕನ್ನಡಿಗ & 92 ವರ್ಷದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಆಘಾತ…

 

ಹೌದು, ಕನ್ನಡ ನಾಡಿನಿಂದ ಮೊಟ್ಟ ಮೊದಲ ಪ್ರಧಾನಿ ಆಗಿ ಆಯ್ಕೆ ಆಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೂರಾರು ಸಾಧನೆ ಮಾಡಿದ್ದಾರೆ. ಅದರಲ್ಲೂ ಭಾರತದ ನೀರಾವರಿ ಕ್ಷೇತ್ರದಲ್ಲಿ ಎಚ್‌ಡಿಡಿ ಅವರ ಸಾಧನೆ ಇಂದಿಗೂ ಯಾರೂ ಮೀರಿಸಲು ಆಗಲ್ಲ. ಅದರಲ್ಲೂ 1947 ಸಮಯದಲ್ಲಿ ಭಾರತ ದೇಶ ಸ್ವತಂತ್ರ್ಯ ಪಡೆದ ನಂತರ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ನೀರಾವರಿ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನ ಮಾಡಿದ ನಾಯಕ ಬೇರೆ ಯಾರೂ ಇಲ್ಲ ಅನ್ನೋ ಮಾತನ್ನು ರಾಷ್ಟ್ರೀಯ ನಾಯಕರೇ ಹೇಳುತ್ತಾರೆ. ಈ ಎಲ್ಲಾ ಹೆಮ್ಮೆಯ ನಡುವೆ ಇದೀಗ ಘೋರ ಸುದ್ದಿಯೊಂದು ಸಂಚಲನ ಸೃಷ್ಟಿ ಮಾಡಿದೆ…

 

ಪ್ರಜ್ವಲ್ ರೇವಣ್ಣಗೆ ದೊಡ್ಡ ಆಘಾತ!

 

ಅಂದಹಾಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಇದೀಗ ಶಾಕ್ ಸಿಕ್ಕಿದ್ದು, ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಮತ್ತೊಂದು ಕಡೆ ಈ ಸುದ್ದಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಕೂಡ ದೊಡ್ಡ ಸುದ್ದಿ ಮಾಡುತ್ತಿದ್ದು, ಜಗತ್ತಿನ ಹಲವು ದೇಶಗಳ ವಿವಿಧ ಮಾಧ್ಯಮಗಳು ಕೂಡ ಈ ಸುದ್ದಿಯನ್ನ ಪ್ರಕಟಿಸಿವೆ. ಸಂಸದ ಪ್ರಜ್ವಲ್ ರೇವಣ್ಣ ಅವರ ಕೇಸ್ ದೊಡ್ಡ ಮಟ್ಟಿಗೆ ಸಂಚಲನವನ್ನು ಸೃಷ್ಟಿ ಮಾಡಿತ್ತು. ಅದರಲ್ಲೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗನಿಗೆ ಈ ರೀತಿ ಶಿಕ್ಷೆ ಪ್ರಕಟವಾಗಿರುವುದು ಇದೀಗ ಭಾರಿ ಸಂಚಲನ ಸೃಷ್ಟಿ ಮಾಡಿದೆ.

 

ಕೆಲವೇ ಗಂಟೆಗಳಲ್ಲಿ ಶಿಕ್ಷೆ ಪ್ರಮಾಣ ಪ್ರಕಟ?

 

14 ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿ ಇರುವ ಪ್ರಜ್ವಲ್ ಇದೀಗ ದೂಷಿ ಎಂದು ತೀರ್ಪು ಹೊರಗಡೆ ಬಿದ್ದಿದ್ದು, ಶಿಕ್ಷೆಯ ಪ್ರಮಾಣ ಮಾನ್ಯ ನ್ಯಾಯಾಲಯದಿಂದ ಕೆಲವೇ ಗಂಟೆಗಳಲ್ಲಿ ಪ್ರಕಟ ಆಗಲಿದೆ. ಹೀಗೆ ಈ ಕೇಸ್ ದೊಡ್ಡ ಮಟ್ಟಿಗೆ ಎಲ್ಲೆಲ್ಲೂ ಸಂಚಲನ ಸೃಷ್ಟಿಸುವ ಜೊತೆಗೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರಾಜಕೀಯ ಜೀವನ ಕೂಡ ಮುಗಿದ ಅಧ್ಯಾಯವಾ? ಅನ್ನೋ ಚರ್ಚೆ ಶುರುವಾಗಿದೆ. ವಾದ & ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ಮಾನ್ಯ ನ್ಯಾಯಾಲಯ ಇದೀಗ ತನ್ನ ತೀರ್ಪು ನೀಡಿದೆ.

Share This Article