ಅಫಜಲಪುರ:- ವಿಧಾನ ಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುತಿದ್ದಂತೆ, ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆಲುವಿನ ಕಸರತ್ತು ನಡೆಸುತ್ತಿವೆ.ಕಾಂಗ್ರೆಸ್ ಭದ್ರಕೋಟೆ ಎಂದು ಬಿಂಬಿತವಾಗಿರುವ ಅಫಜಲಪುರ ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಮಾಜಿ ಶಾಸಕರು ರಾಷ್ಟ್ರೀಯ ಪಕ್ಷಗಳಿಂದ ಕಣಕಿಳಿದರೆ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಸಹೋದರ ನಿತೀನ್ ಗುತ್ತೇದಾರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಮ್.ವೈ.ಪಾಟೀಲ ಸುಪುತ್ರ ಡಾ.ಸಂಜೀವಕುಮಾರ ಪಾಟೀಲ ಅವರು ಗುತ್ತೇದಾರ ಸಹೋದರರಿಬ್ಬರ ವಿರುದ್ದ ಹರಿಹಾಯ್ದರು.