ಚುನಾವಣಾ ಸಾಮಾಗ್ರಿಗಳೊಂದಿಗೆ ಮತಗಟ್ಟೆಕಡೆಗೆ ಸಾಗಿದ ಸಿಬ್ಬಂದಿಗಳು,ಮತದಾನಕ್ಕೆ ಸಕಲ ಸಿದ್ಧತೆ

KTN Admin
2 Min Read

ಲಿಂಗಸುಗೂರ ವರದಿ ::ಸಾರ್ವತ್ರಿಕ ಚುನಾವಣೆಗೆ ಮೇ೧೦ ಬುಧವಾರದಂದು ನಡೆಯಲಿರುವ ಮತದಾನಕ್ಕೆ ತಾಲೂಕಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಮತಯಂತ್ರ ಸೇರಿ ಚುನಾವನಾ ಸಾಮಾಗ್ರಿಗಳೊಂದಿಗೆ ಮತಗಟ್ಟೆಯ ಕಡೆಗೆ ಚುನಾವಣಾ ಸಿಬ್ಬಂದಿಗಳು ತೆರಳಿದರು.

ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತಾಲೂಕಾಡಳಿತವು ಮಸ್ಟರಿಂಗ್ ವ್ಯವಸ್ಥೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು ಲಿಂಗಸಗೂರು ಕ್ಷೇತ್ರದಲ್ಲಿ ಒಟ್ಟು 278. ಮತಗಟ್ಟೆಗಳು ಇದ್ದು ಅದರಲ್ಲಿ 10. ಸೂಕ್ಷ್ಮಂ ಹಾಗೂ ಅತೀಸೂಕ್ಷ್ಮ ಮತಗಟ್ಟಳಾಗಿವೆ ಪಿಂಕ್ ಮತಗಟ್ಟೆಗಳು ಹಾಗೂ ಯುವಮತಗಟ್ಟೆಗಳ ಬಗೆಗೆ ಮಾಹಿತಿ ತಿಳಿದುಬರಲಿಲ್ಲ.
ಪ್ರತಿಮತಗಟ್ಟೆಗೆ 4+1 ರಂತೆ ಒಟ್ಟು 1390 ಸಿಬ್ಬಂದಿಗಳು ಹಾಗೂ 42 ಜನ ಕಾಯದಿಟ್ಟ ಸಿಬ್ಬಂದಿಗಳು ಇದ್ದು 278. ಮತಗಟ್ಟೆಗಳಿಗೆ 666 ಇವಿಎಂಗಳು, ಹಾಗೂ 362. ವಿವಿಪ್ಯಾಟ್ ಗಳೊಂದಿಗೆ ಸಿಬ್ಬಂದಿಗಳು ಮತಗಟ್ಟೆಯ ಕಡೆಗೆ ಸಾಗಿದರು.

ಡಿವೈಎಸ್ಪಿ, ಸಿಪಿಐ ಪಿಎಸ್ ಐ ಸೇರಿದಂತೆ 390. ಸಿವಿಲ್ ಪೊಲೀಸ್ ಹಾಗೂ ಹೋಂಗಾರ್ಡ, 280. ಸಿಆರ್ ಪಿಎಫ್ 50 ಕೆ ಎಸ್ ಆರ್ ಪಿ ಹಾಗೂ ಡಿಆರ್ ಪೊಲೀಸ್ ಸೇರಿದಂತೆ ಬಂದೋಬಸ್ತಿಗಾಗಿ ಪೊಲೀಸ್ ರ ನಿಯೋಜನೆ ಮಾಡಲಾಗಿದೆ.
ಸಾರಿಗೆ ವ್ಯವಸ್ಥೆ:ಸಿಬ್ಬಂದಿಗಳು ಕ್ಷೇತ್ರದ ಆಯಾ ಮತಗಟ್ಟೆಗಳಿಗೆ ತೆರಳಲು 40. ಸಾರಿಗೆ ಬಸ್ ಗಳು, 24. ಕ್ರಶರ್ ಗಳು, 7. ಶಾಲಾವಾಹನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು.

ತಾಲೂಕಾಡಳಿತವು ಎಲ್ಲಾ ಸಿಬ್ಬಂದಿಗಳಿಗೆ ಮತಯಂತ್ರ ವಿತರಣೆ ಅವುಗಳ ಪರಿಶೀಲನೆಗೆ ಸೂಕ್ತ ಸ್ಥಳದ ವ್ಯವಸ್ಥೆಯನ್ನು ಮಾಡಲಾಗಿತ್ತು ಅಲ್ಲದೆ ಊಟ ಹಾಗೂ ಉಪಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಆರೋಗ್ಯ ತಪಾಸಣಾ ವ್ಯವಸ್ಥೆ ಚುನಾವಣಾ ಕರ್ತವ್ಯಕ್ಕೆ ಆಗಮಿಸುವ ಸಿಬ್ಬಂದಿಗಳಿಗೆ ಆರೋಗ್ಯದಲಿ ವ್ಯತ್ಯಾಸವಾದರೆ ಸ್ಥಳದಲ್ಲಿಯೆ ಆರೋಗ್ಯ ತಪಾಸಣೆಗೆ ವ್ಯವಸ್ಥೆಯನ್ನು ಮಾಡಲಾಗಿತ್ತು

ಅನಿವಾರ್ಯ ಕಾರಣಗಳಿಂದ ಕರ್ತವ್ಯದಲಿ ಬದಲಾವಣೆ ಬಯಸಿದವರಿಗೆ ಅಥವ

ಆರೊಗ್ಯದ ತೊಂದರೆ ಇತ್ಯಾದಿಗಳಿಗೆ ಮಾಹಿತಿ ಪಡೆಯಲು ಸಹಾಯಕ

ಆಯುಕ್ತರಿಗೆ ಸಿಬ್ಬಂದಿಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬಂತು

ಆಯಾ ಸಿಬ್ಬಂದಿಗಳು ಮತಗಟ್ಟೆಗೆ ತೆರಳಲು ಮತ್ತು ಸಂಪರ್ಕ ಮಾಡಲು ಅನುಕೂಲವಾಗುವಂತೆ ಧ್ವನಿವರ್ಧಕದ ಮೂಲಕ ಮಾಹಿತಿಯನ್ನು ನೀಡಲಾಗುತ್ತಿತ್ತು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರು ಹಾಗೂ ಚುನಾವಣಾಧಿಕಾರಿಯಾದ ಶಿಂಧೆ ಅವಿನಾಶ ಸಂಜೀವನ್, ತಹಸೀಲ್ದಾರ ಜಾಮದಾರ, ತಾ.ಪಂ ಇಓ ಅಮರೇಶ, ಸೋಮನಗೌಡ, ಸೇರಿದಂತೆ ವಿವಿಧ ಅಧಿಕಾರಿಗಳು ಮಸ್ಟರಿಂಗ್ ನಿರ್ವಹಿಸುವುದು ಕ೦ಡುಬ೦ತು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ