ವಿಧಾನ ಸಭಾ ಚುನಾವಣೆಯಲ್ಲಿ ಸೋತರು ನೀವು ತೋರಿರುವ ಪ್ರೀತಿಯಲ್ಲಿ ಗೆದ್ದಿದ್ದೆನೆ ಎಂದ ನಿತೀನ್ ಗುತ್ತೇದಾರ..
ಅಫಜಲಪುರ ವಿಧಾನ ಸಭಾ ಚುನಾವಣಾ ರಣಕಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಷ್ಟ್ರೀಯ ಪಕ್ಷಗಳಿಗೆ ತೊಡೆ ತಟ್ಟಿದ ನಿತೀನ್ ಗುತ್ತೇದಾರ, ಅಲ್ಪ ಮತಗಳ ಅಂತರದಿಂದ ಸೋಲನುಭವಿಸಿದರು. ಒಂದು ಕಡೆ ಸಹೋದರ ಮಾಲಿಕಯ್ಯ ಗುತ್ತೇದಾರ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಅಫಜಲಪುರ ವಿಧಾನ ಸಭಾ ಚುನಾವಣಾ ಕಣದಲ್ಲಿದ್ದರು. ಅವರನ್ನು ತೊಡೆತಟ್ಟಿ ಕಾಂಗ್ರೆಸ್ ಪಕ್ಷದ ಹಾಲಿ ಶಾಸಕ ಎಮ್.ವೈ.ಪಾಟೀಲ ಮತ್ತೊಮ್ಮೆ ಕಣದಲ್ಲಿದ್ದರೂ ಸಹಿತ, ಪಕ್ಷೇತರ ಅಭ್ಯರ್ಥಿಯಾಗಿ ನಿತೀನ್ ಗುತ್ತೇದಾರ ಚುನಾವಣೆಗೆ ಧುಮುಕಿದರು.
ಸುಮಾರು 51 ಸಾವಿರಕ್ಕಿಂತಲೂ ಹೆಚ್ಚು ಮತಗಳನ್ನು ಪಡೆದು ರಾಷ್ಟ್ರೀಯ ಪಕ್ಷದ ನಾಯಕರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಅಭ್ಯರ್ಥಿ ಎಮ್.ವೈ.ಪಾಟೀಲರ ವಿರುದ್ದ 4700 ಮತಗಳ ಅಂತರದಿಂದ ಸೋತರು. ಆದರೆ ಈ ಸೋಲು ನನ್ನ ಸೋಲಲ್ಲ ಎಂದು ಪಕ್ಷೇತರ ಅಭ್ಯರ್ಥಿ ನಿತೀನ್ ಗುತ್ತೇದಾರ ಪಟ್ಟಣದ ಶ್ರೀ ಮಳೇಂದ್ರ ಕಲ್ಯಾಣ ಮಂಟಪದಲ್ಲಿ ಮತದಾರರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಕ್ಷೇತರ ಅಭ್ಯರ್ಥಿ ನಿತೀನ್ ಗುತ್ತೇದಾರ, ತಾಲೂಕಿನಾಧ್ಯಂತ ಎಲ್ಲಾ ಜನರ ಪ್ರೀತಿಗೆ ನಾನು ಚಿರರುಣಿಯಾಗಿದ್ದೆನೆ. ನನಗೆ ಇಷ್ಟೊಂದು ಪ್ರೀತಿ ತೋರಿ ಸುಮಾರು 52000 ಮತಗಳನ್ನು ನೀಡಿದ್ದಿರಿ. ಚುನಾವಣೆಯಲ್ಲಿ ಗೆಲುವು ಸೋಲು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನು ಸಮಾನವಾಗಿ ಸ್ವಿಕರಿಸೋಣ ಎಂದರಲ್ಲದೆ, ಮುಂಬರುವ ತಾಲೂಕು ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆಗಳಲ್ಲಿ ನಿಮ್ಮೆಲ್ಲರ ಒಪ್ಪಿಗೆ ಮೇರೆಗೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆನೆ ಎಂದರು. ನಾನು ಸೋತಿರಬರುದು ಆದರೆ ನಿಮ್ಮ ಪ್ರೀತಿ ವಿಶ್ವಾಸ ಗಳಿಸುವುದರಲ್ಲಿ ಗೆದ್ದಿದ್ದೆನೆ. ನಾನು ಚುನಾವಣೆಯಲ್ಲಿ ಸೋತಿದ್ದೆನೆ ಎಂದು ಯಾರು ಎದೆಗುಂದಬೇಡಿ. ನಿಮ್ಮ ಕಷ್ಟ ಸುಖಗಳಲ್ಲಿ ನಾನು ಯಾವಾಗಲೂ ಭಾಗಿಯಾಗುತ್ತೆನೆ ಎಂದರು. ಚುನಾವಣೆಯಲ್ಲಿ ನನ್ನ ಜೊತೆಗೆ ನೀವಿದ್ದಿರಿ.ನಾನು ನಿಮ್ಮ ಜೊತೆಗೆ ಯಾವಾಗಲೂ ಇರುತ್ತೆನೆ.ಮುಂಬರುವ ಚುನಾವಣೆಯಲ್ಲಿ ನನ್ನ ರಾಜಕೀಯ ವಿರೋಧಿಗಳು ಇಲ್ಲ ಸಲ್ಲದ ಆರೋಪಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಅದ್ಯಾವುದಕ್ಕೂ ನೀವು ತಲೆಕೆಡಿಸಿಕೊಳ್ಳಬೇಡಿ.ನಾನು ನಿಮ್ಮ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆನೆ ಎಂದರು.
ಇದೆ ಸಂದರ್ಭದಲ್ಲಿ ಮುಖಂಡರಾದ ಮಕ್ಬೂಲ್ ಪಟೇಲ, ತುಕಾರಾಮಗೌಡ ಪಾಟೀಲ, ಸೈಬಣ್ಣಾ ಪೂಜಾರಿ, ವಿಶ್ವನಾಥ ರೇವೂರ,ರಾಜು ಜಿಡ್ಡಗಿ,ರಮೇಶ ಬಾಕೆ, ಭೀಮಾಶಂಕರ ಹೋನ್ನಕೇರಿ, ಧಾನು ಪತಾಟೆ,ಸುನೀಲ ಶೆಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.