ಲಿಂಗಸಗೂರು, ಅಬಕಾರಿ ಇಲಾಖೆಯು ಜನತೆಯಲ್ಲಿ ಸಾಕಷ್ಟು ಜಾಗೃತಿಯನ್ನು ಮೂಡಿಸುವುದರ ಮೂಲಕ ಕಳ್ಳಬಟ್ಟಿ ನಿಯಂತ್ರಣಕ್ಕೆ ಇಲಾಖೆ ಶ್ರಮಿಸುತ್ತಿದೆ ಎಂದು ಅಬಕಾರಿ ಇಲಾಖೆಯ ಡಿಎಸ್ಪಿ ಹರಿಕೃಷ್ಣ ಹೇಳಿದರು
ಅವರು ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡುತ್ತಾ ಮಾಹಿತಿ ಮೇರೆಗೆ ಜಕ್ಕೇರಮಡು ಹಾಗೂ ಗೊರೇಬಾಳ ತಾಂಡಕ್ಕೆ ಬೆಳಗ್ಗೆ 7ರಿಂದ 2ರವರೆಗೆ ದಾಳಿ ನಡೆಸಿದೆವು ದಾಳಿಯಲ್ಲಿ ಯಾವುದೆ ಪರಿಕರಗಳು ಲಭ್ಯವಾಗಿಲ್ಲವೆಂದರು ಅಲ್ಲದೆ ಕಳ್ಳಬಟ್ಟಿ ನಿಯಂತ್ರಣಕ್ಕಾಗಿ ಗ್ರಾಮಗಳಲ್ಲಿ ಇಲಾಖೆಯಿಂದ ಗ್ರಾಮಸಭೆ ಸೇರಿ ಹಲವಾರು ಜಾಗೃತಿಗಳನ್ನು ಮಾಡಲಾಗುತ್ತಿದೆ ಎಂದರು
ಚುನಾವಣೆಯ ಸಂದರ್ಭದಲ್ಲಿ ಲಿಂಗಸಗೂರಿನಲಿ ಸಾಕಷ್ಟು ಪ್ರಕರಣಗಳನ್ನು ದಾಖಲು ಮಾಡಲಾಯಿತು ಮಾಹಿತಿ ಮೇರೆಗೆ ನಾವು ದಾಳಿ ಮಾಡುತ್ತಲೆ ಇರುತ್ತೇವೆ ಆದರೆ ಜನತೆ ಜಾಗೃತರಾಗಿದ್ದಾರೆ ಅಂತಹ ಪ್ರಕರಣಗಳು ಏನಾದರು ಇದ್ದರೆ ಇಲಾಖೆಯ ಗಮನಕ್ಕೆ ತನ್ನು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶೈಲಜಾ ಡಿಸಿಐ, ಹನಮಂತ ಗುತ್ತೇದಾರ, ಸಂತೋಷ ಹರಿಜನ ಮಹ್ಮದ್ ಖಾಜಾಹುಸೇನ್ ಸೇರಿದಂತೆ ಇದ್ದರು.