ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೈನಾಪುರದಲ್ಲಿ ಇಂದು 7 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿಸಲಾಯಿತು

KTN Admin
1 Min Read

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಜೈನಾಪುರದಲ್ಲಿ ಇಂದು 7 ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನೆರವೇರಿಸಲಾಯಿತು.ಕಾರ್ಯಕ್ರಮದ ನಿರೂಪಣೆ ಶಾಂತಮೂರ್ತಿ ಸರ್ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು. ಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಸುನಂದಾ r ದೇಶಪಾಂಡೆ ಮೇಡಂ ಅವರಿಗೆ ನೀಡಲಾಯಿತು. ಮುಖ್ಯ ಅಥಿತಿ ಸ್ಥಾನವನ್ನು ಶಿಕ್ಷಣ ಪ್ರೇಮಿಗಳಾದ ಶ್ರೀಯುತ ಬಸವರಾಜ ಕಾರನೂರ್ ಅವರು ಉಪಸ್ಥಿತರಿದ್ದರು. ಅದೇ ರೀತಿಯಾಗಿ ಅಥಿತಿ ಸ್ಥಾನ ದಲ್ಲಿ ಗ್ರಾಮ ಪಂಚಾಯತ್ ಮಾಲಗತ್ತಿ ಗ್ರಂಥಪಾಲಕರಾದ ವಿಜಯಕುಮಾರ್ ದರ್ಶನಾಪುರ,sdmc ಸದಸ್ಯರಾದ ರಾಜಸಾಬ್ ಸೈಯದ್, ಮಲ್ಲಪ್ಪ ಅರಿಕೇರಿ,ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು. ಶಾಲೆಯ ಪ್ರಾಸ್ತವಿಕ ನುಡಿ h. M ಮೇಡಂ ಸುನಂದಾ ದೇಶಪಾಂಡೆ ಮಾತಾನಾಡಿದರು. ಮುಖ್ಯ ಅತಿಥಿ ಸ್ಥಾನವಹಿಸಿದ ಶ್ರೀ ಬಸವರಾಜ್ ಕಾರನೂರ್ &ವಿಜಯಕುಮಾರ್ ದರ್ಶನಾಪುರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.7 ನೇ ತರಗತಿ ಮಕ್ಕಳು ತಮ್ಮ ಅನುಭವವನ್ನು ಬಹಳ ಭಾವುಕತೆಯಿಂದ್ ಅಚ್ಚಿಕೊಂಡರು.6 &5 ನೇ ತರಗತಿ ಮಕ್ಕಳು ಸಹ ತಮ್ಮ ಸಹೋದರ ಸಹೋದರಿಯರ ಒಡನಾಟದ ಕುರಿತು ತಮ್ಮ ತೊದಲು ನುಡಿಗಳಿಂದ ಹೇಳಿದರು. ಸರಕಾರಿ ಶಾಲೆ ಯಾವ್ ಪ್ರಾವೇಟ್ ಶಾಲೆಗಿಂತ ನಾವೇನು ಕಮ್ಮಿ ಇಲ್ಲಾ ಅನ್ನುವಂತೆ.. ಸಾಮೂಹಿಕ ನೃತ್ಯ, ಹಾಡುಗಳ ಮೂಲಕ ಕಾರ್ಯಕ್ರಮಕ್ಕೆ ರಂಗಿನ ಮೆರುಗು ನೀಡಿದರು. ಕೊನೆಗೆ ಸಭೆಯನ್ನು ಉದ್ದೇಶಿಸಿ ವಂದನಾರ್ಪಣೆಯನ್ನು ಶ್ರೀಮತಿ ಸುನಂದಾ R ಪಾಟೀಲ್ ನೆರವೇರಿಸಿದರು. ಮಕ್ಕಳು ಶಾಲೆಗೆ ಕಾಣಿಕೆಯನ್ನು ಶಾಲೆಗೆ ನೀಡಿದರು. ಕೊನೆಗೆ ಉಪಹಾರ ದ ಸೇವನೆಯೊಂದಿಗೆ ಕಾರ್ಯಕ್ರಮವನ್ನು ಮಂಗಳ ನೀಡಲಾಯಿತು. ಈ ಸರಕಾರಿ ಶಾಲೆ ಎಲ್ಲ ಶಾಲೆಗೂ ಮಾದರಿ ಶಾಲೆಯಾಗಲಿ.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ