ವಿಜಯಪುರ ಜಿಲ್ಲಾ ಮಹಿಳಾ ಪೋಲಿಸ ಠಾಣೆಯಲ್ಲಿ ಮಹರ್ಷಿ ಶ್ರೀಭಗೀರಥ ಋರ್ಷಿ ರವರ ಜಯಂತಿ ಆಚರಣೆ.

KTN Admin
1 Min Read

ವಿಜಯಪುರ ಜಿಲ್ಲೆಯ ಜಿಲ್ಲಾ ಕೇಂದ್ರದಲ್ಲೆ ಇರುವ ಹಲವು ಜಿಲ್ಲಾ ಸರ್ಕಾರಿ ಕಛೇರಿಗಳಲ್ಲಿ ಮಹರ್ಷಿ ಶ್ರೀ ಭಗೀರಥ ರವರ ಜಯಂತಿಯನ್ನು ಆಚರಣೆ ಮಾಡಿಲ್ಲ ಗಂಗಾ ಸಪ್ತಮಿ ದಿನ  ಬಹಳ ಮಹತ್ವದ ದಿನ‌ವಾಗಿದೆ. ಮಾತೆ ಶ್ರೀ ಗಂಗಾಪರಮೇಶ್ವರಿಯನ್ನು ಭೂಮಿಗೆ ಒಂಟಿಗಾಲನಲ್ಲಿ ತಪಸ್ಸು ಮಾಡಿ ದರೆಗೆ ತಂದದಿನ, ಭಗೀರಥ ಮಹರ್ಷಿಗಳ ಗೌರವಾರ್ಥ ಜಯಂತಿ ಆಚರಣೆ ಮಾಡಲಾಗುತ್ತದೆ.ಇಂತ ಜಯಂತಿಯನ್ನು ಆಚರಣೆ ಮಾಡದೆ ಇರುವ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳಾದ ಟಿ ಬೂಬಾಲನ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕವಾಗಿ ಹೋರಾಟಗಾರರಾದ ಅಮರೇಶಣ್ಣ ಕಾಮನಕೇರಿಯವರು ಆಗ್ರಸಿದರು.

ವಿಜಯಪುರ :ವಿಜಯಪುರ ಜಿಲ್ಲಾ ಮಹಿಳಾ ಪೋಲಿಸ ಠಾಣೆಯ ಕಚೇರಿಯಲ್ಲಿ ಮಹರ್ಷಿ ಶ್ರೀ ಭಗೀರಥ ಋರ್ಷಿ ರವರ ಜಯಂತಿ ಅಂಗವಾಗಿ, ಶ್ರೀ ಭಗೀರಥ ಋರ್ಷಿಗಳರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಸಿಪಿಆಯ್ ಶ್ರೀಶೈಲ್ ಬ್ಯಾಕೋಡ ರವರು ಮಾಡಿ ಗೌರವ ಸಲ್ಲಿಸಿ ಸರಳವಾಗಿ ಆಚರಿಸಿದ್ದರು. ಚುನಾವಣೆ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಕಾರ್ಯಕ್ರಮ ಆಚರಿಸಲಾಯಿತು.

ವಿಜಯಪುರ ಜಿಲ್ಲಾ ಮಹಿಳಾ ಪೋಲಿಸ ಠಾಣೆಯಲ್ಲಿ
ಮಹರ್ಷಿ ಶ್ರೀ ಭಗೀರಥ ಋರ್ಷಿಗೆ ಪೂಜೆ ನೆರವೇರಿದ ಸಿಪಿಆಯ್ ಶ್ರೀಶೈಲ್ ಬ್ಯಾಗೋಡ ಹಾಗೂ ಸಿಬ್ಬಂದಿ ವರ್ಗ

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಪೋಲಿಸ ಠಾಣೆಯ ಸಿಪಿಆಯ್ ಶ್ರೀಶೈಲ್ ಬ್ಯಾಕೋಡ, ಪಿಎಸ ಆಯ್ ಸರಸ್ವತಿ ನರಸಪ್ಪನವರ, ಸಾಮಾಜಿಕ ಹೋರಾಟಗಾರರು ಹಾಗೂ ಪತ್ರಕರ್ತರಾದ ಅಮರೇಶಣ್ಣ ಕಾಮನಕೇರಿ,ಪತ್ರಕರ್ತರಾದ ರವೀಂದ್ರ ನಾಯ್ಕೋಡಿ ಹಾಗೂ ಠಾಣಾ ಸಿಬ್ಬಂದಿಗಳಾದ ಆರ,ಕೆ ನಾಡಗೇರ,ವಿಠ್ಠಲ್ ಕಟ್ಟಿಮನಿ,ವಿಜಯ ಕೋಟ್ಯಾಳ, ಶ್ರೀಶೈಲ ಮಸಲಿ,ರಾಘವೇಂದ್ರ ದೇವರು,ಮಹದೇವ ದ್ಯಾಬೇರಿ ಠಾಣೆಯ ಮಹಿಳಾ ಸಿಬ್ಬಂದಿಗಳಾದ ಯಲ್ಲಮ್ಮ, ಸರೋಜಿನಿ,ವಾಹನ ಚಾಲಕರಾದ ಸಂಜಯ್ ಹಾಗೂ ಗೃಹ ರಕ್ಷಕ ದಳ ಸಿಬ್ಬಂದಿ ಸಿದ್ದು ಹಾಗೂ ಇತರರು ಹಾಜರಿದ್ದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ