ಅಫಜಲಪುರ : ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಮತ್ತೆ ಮರು ಹುಬ್ಬಳ್ಳಿಯಲ್ಲಿ ಮತ್ತೊಂದು ಕೊಲೆ ನಡೆದಿದೆ. ಹುಬ್ಬಳ್ಳಿಯ ವೀರಾಪುರ ಬಡಾವಣೆಯ ಅಂಜಲಿ ಅಂಬಿಗೇರ ಎನ್ನುವ ಯುತಿಯನ್ನು ಹಾಡು ಹಗಲ್ಲೇ ಕೊಲೆಯಾಗಿದ್ದಾಳೆ. ರಾಜ್ಯದಲ್ಲಿ ಮೇಲಿಂದ ಮೇಲೆ ಇಂತಹ ದುರ್ಘಟನೆಗಳು ನಡೆಯುತ್ತಲೆ ಇವೆ. ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟು ಹೋಗುತ್ತಿದೆ ‘ ಎಂದು ಕರ್ನಾಟಕ ಜನಸೈನ್ಯ ಸಂಘಟನೆಯ ತಾಲೂಕ ಅಧ್ಯಕ್ಷರಾದ ಉಮೇಶ ಎಸ್, ಅಂದೋಡಗಿ ರವರು ಆರೋಪಿಸಿದ್ದಾರೆ.
ಸರ್ಕಾರ ಕೊಡಲೇ ಹಿಂತಾ ಘಟನೆಗಳು ಮರುವಾಗದಂತೆ ಎಚ್ಚೆತ್ತು ಕೊಳ್ಳಬೇಕು. ಅದರಲ್ಲಿಯೂ ಅಂಜಲಿ ಅಂಬಿಗೇರ ಕುಟುಂಬಸ್ಥರು ಮುಂಚಿತವಾಗಿ ದೂರು ನೀಡಿದ್ದಾರೆ. ಆದರೆ ಪೊಲೀಸರ ನಿರ್ಲಕ್ಷ್ಯವೇ ಅಂಜಲಿ ಅಂಬಿಗೇರ ಸಾವಿಗೆ ಕಾರಣ ಇದು ಖಂಡನೀಯ ಸಾರ್ವಜನಿಕರ ರಕ್ಷಣೆ ಯ ಜವಾಬ್ದಾರಿ ಸರ್ಕಾರದ ಮತ್ತು ಇಲಾಖೆಯ ಕರ್ತವ್ಯ, ಕೊಲೆ ಮಾಡಿದ ಆರೋಪಿಯನ್ನು ಕೂಡಲೇ ಮರಣದಂಡನೆ ಶಿಕ್ಷೆಗೆ ಒಳಪಡಿಸಬೇಕು , ಮತ್ತು ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿಗೆ ತೆಗೆದುಕೋಳ್ಳಬೇಕು, ಹಾಗೂ ಅಂಜಲಿ ಕುಟುಂಬಕ್ಕೆ 50ಲಕ್ಷ ರೂಪಾಯಿ ಸರ್ಕಾರ ಧನ ಸಹಾಯ ನೀಡಬೇಕು, ರಾಜ್ಯದಲ್ಲಿ ಹಿಂತಾ ಘಟನೆಗಳು ವಾಗದಂತೆ ಕಠಿಣ ಕಾನೂನು ಕ್ರಮ ಜಾರಿಗೆ ಮಾಡಬೇಕು’ಎಂದು ತಿಳಿಸಿದ್ದಾರೆ.