ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಹೊರವಲಯದ ಪ್ರತಿಷ್ಠಿತ ಖಾಸಗಿ ಹೋಟೆಲ್ ಮೋರಟಗಿ ಬಾರ್ ಮತ್ತು ರೆಸ್ಟೋರೆಂಟ್ ಒಂದರಲ್ಲಿ ಕೆಲವು ದುಷ್ಕರ್ಮಿ ಪಾಪಿಗಳು ಅಟ್ಟಾಡಿಸಿಕೊಂಡು ಕೋಲಿ ಸಮಾಜದ ಅರಣ್ಯ ರಕ್ಷಕ ಉಪ ವಲಯ ಅಧಿಕಾರಿಯವರಿಗೆ ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ ರೆಸ್ಟೋರೆಂಟಿಗೆ ಹೋಗಿದ್ದ ಉಪ ಅರಣ್ಯ ವಲಯ ಅಧಿಕಾರಿಯನ್ನು ರೆಸ್ಟೋರೆಂಟ್ ನಲ್ಲಿ ಕೊಲೆ ಮಾಡಿ ಪರಾರಿಯಾದ ದುಷ್ಕರ್ಮಿ ಪಾಪಿಗಳು. ಜೂನ್ 5ರಂದು ತಡರಾತ್ರಿ ನಡೆದಿದೆ. ಮೇಲ್ನೋಟಕ್ಕೆ ಶಹಾಪುರ್ ಪೊಲೀಸ್ ಅಧಿಕಾರಿಗಳು ಆಕಸ್ಮಿಕ ಸಾವು ಎಂದು ಪ್ರಕರಣ ಮುಚ್ಚಿ ಹಾಕಲು ಮುಂದಾದಾಗ ಕೋಲಿ ಸಮಾಜದ ಮುಖಂಡರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಈ ಪ್ರಕರಣ ಹೇಗೆ ಆಕಸ್ಮಿಕ ಸಾವು ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ಕಕ್ಕಾಬಿಕ್ಕಿದ್ದಾರೆ ಕೋಲಿ ಸಮಾಜದ ಕೆಲ ಮುಖಂಡರು ಹಾಗೂ ಕುಟುಂಬದವರು ಪೊಲೀಸರ ಮೇಲೆ ನಮಗೆ ಅನುಮಾನವಿದೆ ನನ್ನ ಗಂಡ ಆಕಸ್ಮಿಕವಾಗಿ ಮರಣ ಹೊಂದಿಲ್ಲವೆಂದು ಅರಣ್ಯ ಅಧಿಕಾರಿ ಅವರ ಧರ್ಮಪತ್ನಿ ನಾಗವೇಣಿ ಕನಕನಕಟ್ಟಿ ಪೊಲೀಸರಿಗೆ ಪ್ರಶ್ನಿಸಿದ್ದಾಳೆ ಜೂನ್ 17ರಂದು ಮತ್ತೊಂದು ಬಾರಿ ದೂರ್ ನೀಡಿದ್ದಾರೆ ಈ ಕುರಿತು ಕೋಲಿ ಸಮಾಜದ ಉಪವಲಯ ಅರಣ್ಯ ಅಧಿಕಾರಿ ಮಹೇಶ್ ಕನಕ ಕಟ್ಟಿ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದ ಕೋಲಿ ಸಮಾಜದ ಮುಖಂಡರು ಸೇರಿ ಮೃತ ಅರಣ್ಯ ವಲಯ ಅಧಿಕಾರಿ ಕೊಲೆ ಪ್ರಕರಣ ಕುರಿತು ಸೂಕ್ತ ತನಿಖೆ ಮಾಡುವಂತೆ ಆಗ್ರಹಿಸಿದರು ಪ್ರಥಮ ವರ್ತಮಾನ ವರದಿಗಾಗಿ ಶಹಪುರ್ ತಾಲೂಕ್ ಕೋಲಿ ಕಬ್ಬಲಿಗ ಸಮಾಜದ ಮುಖಂಡರು ಹಾಗೂ ಕರ್ನಾಟಕ ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರು ಅಮರೇಶಣ್ಣ ಕಾಮನಕೇರಿ ಅವರು ಹಾಗೂ ಶಹಪುರ ತಾಲ್ಲೂಕ ಕೋಲಿ ಹಿರಿಯ ಮುಖಂಡರು ಸೇರಿ ಹಗಲು ರಾತ್ರಿ ಎನ್ನದೆ ಠಾಣೆಯಲ್ಲಿ ಇದ್ದುಕೊಂಡು ಕೊನೆಗೆ ಎಫ್ ಐ ಆರ್ ದಾಖಲಿಸುವಲ್ಲಿ ಸಫಲರಾದರು. ಘಟನೆ ವರದಿ ಮಹೇಶ್ ಕನಕ ಕಟ್ಟಿ ಎನ್ನುವ ವಲಯ ಅರಣ್ಯ ಅಧಿಕಾರಿ ಕಳೆದ ಮೂರು ವರ್ಷಗಳಿಂದ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಎನ್ನಲಾಗಿದೆ. ಕೊನೆಗೆ ಮಹೇಶ್ ಕನಕ ಕಟ್ಟಿ ಕೊಲೆಯಾಗಿದೆ ಎಂದು ಕುಟುಂಬಸ್ಥರಿಗೆ ಸಂಶೆ ವ್ಯಕ್ತವಾದಾಗ ಶಹಪುರ್ ತಾಲೂಕ ಕೋಲಿ ಕಬ್ಬಲಿಗ ಗಂಗಾಮತ ಸಮಾಜದ ಮುಖಂಡರು ಠಾಣೆಯ ಮುಂದೆ ಜಮಾಹಿಸಿದರು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕುಟುಂಬದವರ ಸಂಕಲ್ಪದಂತೆ ದೂರು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಳ್ಳುವುದಕ್ಕೆ ಎರಡು ದಿನ ಕಾಲ ಅರಣವಾಯಿತು ಅಮಾಯಕ ಅರಣ್ಯ ಅಧಿಕಾರಿ ಓರ್ವನ ಹತ್ಯ ಕುರಿತು ಖಾಸಗಿ ರೆಸ್ಟೋರೆಂಟ್ ಹೋಟೆಲ್ ಸಿಸಿಟಿವಿ ದೃಶ್ಯಾವಳಿಯಿಂದ ಕೊಲೆ ರಹಸ್ಯ ಬಯಲಾಗಿದೆ ಎಂದು ಹೇಳಲಾಗುತ್ತಿದೆ. ಅರಣ್ಯ ಉಪವಲಯ ಅಧಿಕಾರಿಯಾಗಿದ್ದ ಮಹೇಶ್ ಕನಕ ಕಟ್ಟಿಯ ಕೊಲೆ ಕೋಲಿ ಕಬ್ಬಲಿಗ ಗಂಗಾಮತ ಸಮಾಜಕ್ಕೆ ನುಂಗಲಾರದ ತುತ್ತಾಗಿದೆ. ಅಮಾಯಕ ಅರಣ್ಯ ಅಧಿಕಾರಿಯನ್ನು ಕಗ್ಗೊಲೆ ಮಾಡಿರುವ ಕೊಲೆ ದುಷ್ಕರ್ಮಿ ಪಾತಾಕಿಗಳಿಗೆ ಕೂಡಲೆ ಬಂಧಿಸಿ ಅವರಿಗೆ ಕಾನೂನ್ನಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಕುಟುಂಬಸ್ಥರಿಗೆ ಸೂಕ್ತವಾದ ನ್ಯಾಯ ಒದಗಿಸಬೇಕು ಈ ಪ್ರಕರಣ ಮೆಚ್ಚಿ ಹಾಕಲು ಯತ್ನಿಸಿದರೆ ಕೋಲಿ ಕಬ್ಬಲಿಗ ಸಮಾಜದ ಮುಖಂಡರು ಉಗ್ರವಾದ ಹೋರಾಟ ಮಾಡುತ್ತಿವೆ ಎಂದು ಸಮಾಜದ ಮುಖಂಡರು ಪತ್ರಿಕೆಗೆ ತಿಳಿಸಿದರು