ಮಾಲಗತ್ತಿಯ ಗ್ರಾಮದ ಸಂಜೀವಪ್ಪ ದೇವಾಪುರ ಇವರು ಕುರಿ ಸಾಕಾಣಿಕೆ ನಂಬಿ ಜೀವನ ನಡೆಸುತ್ತಿದ್ದರು ಆದರೆ ಇವತ್ತು ಅವರ 15 ಕುರಿ ಮರಿಗಳು ಇಂದು ಬೀದಿ ನಾಯಿಗಳ ಕಾಟಕ್ಕೆ ಬಲಿಯಾಗಿದ್ದು. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಕುರಿ ಮರಿಗಳು ರಕ್ಷಣೆ ಇಲ್ಲದಂತಾಗಿದೆ ಎಂದರು ಗ್ರಾಮ ಪಂಚಾಯಿತಿ ಅವರು ಕೂಡಲೇ ಎಚ್ಚೆತ್ತುಕೊಂಡು ಬೀದಿ ನಾಯಿ ಹಾವಳಿಯಿಂದ ನಮಗೆ ರಕ್ಷಣೆ ಕೊಡಬೇಕೆಂದು ಕೇಳಿಕೊಂಡರು ಸರ್ಕಾರ ಕೂಡ ಕುರಿ ಸಾಕಾಣಿಕೆ ನಂಬಿ ಜೀವನ ನಡೆಸುತ್ತಿದ್ದ ನಮಗೆ ಪರಿಹಾರ ಕೊಡಬೇಕೆಂದು ಕೇಳಿಕೊಂಡರು