ಯಡ್ರಾಮಿ : ಬಸವೇಶ್ವರ ಮೂರ್ತಿಯಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಚರಂಡಿ ತುಂಬಿ ಕೆಟ್ಟ ದುರ್ವಾಸನೆ ಬರುತ್ತಿದೆ ಪ್ಲಾಸ್ಟಿಕ್ ಬಾಟಲ್ ಪ್ಲಾಸ್ಟಿಕ್ ಪೇಪರ್ ಇತರೆ ತ್ಯಾಜ್ಯ ವಸ್ತುಗಳು ಚಿರಂಡಿ ತುಂಬ ತುಂಬಿದೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಬಾರಿ ಗಮನಕ್ಕೆ ತಂದರು ಯಾವುದೇ ರೀತಿ ಸ್ವಚ್ಛತೆ ಬಗ್ಗೆ ಗಮನಹರಿಸಿಲ್ಲ ಮಳೆಗಾಲ ಇರುವುದರಿಂದ ಜನರಿಗೆ ಡೆಂಗ್ಯೂ ಟೈಪೆಡ್ ಮಲೇರಿಯಾ ಮಹಾಮಾರಿ ಕಾಯಿಲೆಗಳು ಜನರನ್ನು ಕಾಡುತ್ತಿವೆ ಇಂಥ ಸಂದರ್ಭದಲ್ಲಿ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡು ಬಸವೇಶ್ವರ ಮೂರ್ತಿಯಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಚರಂಡಿಯನ್ನು ಕೂಡಲೇ ಸ್ವಚ್ಛಗೊಳಿಸಬೇಕು ಒಂದು ವೇಳೆ ಸ್ವಚ್ಛಗೊಳಿಸದಿದ್ದಲ್ಲಿ ಕರ್ನಾಟಕ ದಲಿತ ಸೇನೆ ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಮೈಲಾರಿ ಎಸ್ ಗಂಗಾಕರ್ ಕರ್ನಾಟಕ ದಲಿತ ಸೇನೆ ಗ್ರಾಮ ಘಟಕ ಇವರು ತಿಳಿಸಿದರು