ಪರಸನಹಳ್ಳಿ ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸುಮಾರು ೧೭ ವರ್ಷಗಳ ಕಾಲ‌ ಸೇವೆ ಸಲ್ಲಿ‌ಸಿ ವರ್ಗಾವಣೆಯಾದ ಶಿಕ್ಷಕ ಶಂಭುಲಿಂಗ ದುರ್ಗದ ಬೀಳ್ಕೋಡಿಗೆ ಸಮಾರಂಭ

KTN Admin
1 Min Read

ಪರಸನಹಳ್ಳಿ: ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯಪಾತ್ರವನ್ನು ವಹಿಸುತ್ತದೆ ಒಂದು ಶಿಲೆಗೆ ಕಲಾವಿದ ಹೇಗೆ ತನ್ನ ಕೈಚಳಕದಿಂದ ಪೂಜಿಸುವ ಭಾವನೆ ಮೂಡಿಸುವನೊ ಹಾಗೇ ಶಿಕ್ಷಕನ ಪಾತ್ರವು ಅಷ್ಟೇ ಪ್ರಮುಖವಾದದ್ದು ಎಂದು ಸಾಹಿತಿ ನಿಂಗನಗೌಡ ದೇಸಾಯಿ ಹೇಳಿದರು,
ಪಟ್ಟಣದ ಸಮೀಪದ ಪರಸನಹಳ್ಳಿ ಗ್ರಾಮದ ಸ.ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸುಮಾರು ೧೭ ವರ್ಷಗಳ ಕಾಲ‌ ಸೇವೆ ಸಲ್ಲಿ‌ಸಿ ವರ್ಗಾವಣೆಯಾದ ಶಿಕ್ಷಕ ಶಂಭುಲಿಂಗ ದುರ್ಗದ ಬೀಳ್ಕೋಡಿಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗುರುವಿಗೆ ಅತ್ಯಂತ ಬಹುದೊಡ್ಡ ಶಕ್ತಿಯಿದೆ ಗುರುವಿನ ಸನ್ಮಾರ್ಗದಲ್ಲಿ ನಡದರೆ ಸುಲಭವಾಗಿ ಗೋವಿಂದನನ್ನು ಕಾಣಬಹುದು ಎಂದು ಹೇಳಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಿಕ್ಷಕ ದುರ್ಗದ ಅವರನ್ನು ಅವರ ನೆಚ್ಚಿನ ವಿದ್ಯಾರ್ಥಿಗಳು ಮೆರವಣಿಗೆ ಮಾಡಿದರು.ಈ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು GMPC ಪರಸನಹಳ್ಳಿ ಶಾಲೆಯ ಪ್ರಧಾನ ಗುರುಗಳಾದ ಮಲ್ಲಣ್ಣ ಸುರಪುರ,ಗೌರವ ಅದ್ಯಕ್ಷತೆ ಹಳ್ಳೆಪ್ಪಗೌಡ ಮಾಲಿ ಪಾಟೀಲರು ಮುಖ್ಯ ಅತಿಥಿಯಾಗಿ ಚುಟುಕು ಸಾಹಿತಿ ನಿಂಗಣಗೌಡ ದೇಸಾಯಿ ಅವರು ವಹಿಸಿಕೊಂಡಿದ್ದರು
ನಂತರ ಮಾತನಾಡಿದ ಶಾಲೆಯ ಮುಖ್ಯಗುರುಗಳಾದ ಮಲ್ಲಣ್ಣ ಸುರಪುರ ಶಿಕ್ಷಕ ದುರ್ಗದ ಅವರ ಸೇವೆ ಅನನ್ಯವಾದದ್ದು ಅವರ ಸೇವಾಧಿಯಲ್ಲಿ ವಿದ್ಯಾರ್ಥಿಗಳಿಗ ಕಲಿಕೆಗೆ ಅವಿರತ ಶ್ರಮಿಸಿದವರು ಎಂದು ಹೇಳಿದರು
ಈ ಸಂದರ್ಭದಲ್ಲಿ ಶಾಲೆಯ
ಸಹ ಶಿಕ್ಷಕರು ಮತ್ತು ಶಂಭುಲಿಂಗ ದುರ್ಗದ ಅವರ ಆತ್ಮೀಯ ಹಳೆಯ ವಿದ್ಯಾರ್ಥಿ ಬಳಗದವರು,ಗ್ರಾಮದ ಹಿರಿಯರು ಸೇರಿದಂತೆ ಇತರಿದ್ದರು.ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಕುಂಭಾರ ನಿರೂಪಿಸಿದರು, ರಮೇಶ ಪಂಚ್ ಸ್ವಾಗತಿಸಿದರು. ಹಳ್ಳೇಪ್ಪ ಸುರುಪೂರ ವಂದಿಸಿದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ