ವಿವಿಧ ಬೇಡಿಕೆಗಳು ಈಡೇರಿಸುವಂತೆ ಮಾದಿಗ ಸಂಘರ್ಷ ಸಮಿತಿ ಆಗ್ರಹ

KTN Admin
1 Min Read

ಕಲಬುರ್ಗಿ : ಜೇವರ್ಗಿ ಪಟ್ಟಣದಲ್ಲಿ ಮಾದಿಗ ಸಂಘರ್ಷಸಮಿತಿ ತಾಲೂಕ ಘಟಕ ಮತ್ತು ನಗರ ಘಟಕ ವತಿಯಿಂದ ಪುರಸಭೆ ಕಾರ್ಯಾಲಯದಲ್ಲಿ 2017-18ನೇ ಸಾಲಿನಲ್ಲಿ ಬಡವರಿಗಾಗಿ ನೀಡಲಾದ ನಿವೇಶನದ ಹಕ್ಕು ಪತ್ರಗಳನ್ನು ಕೊಡದೆ ಇರುವ ಮತ್ತು ವಾರ್ಡ್ ನಂ 05 ರಲ್ಲಿ SCP ಮತ್ತು TSP ಅನುದಾನದಲ್ಲಿ ಮಂಜೂರಾದ ಶೌಚಾಲಯ ಕಾಮಗಾರಿ ಸುಮಾರು 10 ವರ್ಷ ಕಳೆದರೂ ಕಾಮಗಾರಿ ಮಾಡದಿರುವ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿ ಮನವಿ ಪತ್ರ ನೀಡಲಾಯಿತು. ಮತ್ತು ಮುಂಬರುವ 10ದಿನಗಳಲ್ಲಿ ಹಕ್ಕುಪತ್ರ ಕೊಡದೆ ಹೋದ ಪಕ್ಷದಲ್ಲಿ ಪುರಸಭೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುವುದಾಗಿ ತಿಳಿಸಲಾಯಿತು. ಈ ಹೋರಾಟದಲ್ಲಿ ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷರಾಗಿರುವ ಮಾನಪ್ಪ ಬಿ ಗೋಗಿ, ಕಾರ್ಯದರ್ಶಿಗಳಾದ ಅನಿಲಕುಮಾರ ದೊಡ್ಡಮನಿ, ಸಮಾಜದ ಮುಖಂಡರಾದ ಸೈದಪ್ಪ ಹೊಸಮನಿ ಇಜೇರಿ,ನಗರ ಘಟಕ ಅಧ್ಯಕ್ಷ ಅಭಿಷೇಕ ಮಂದ್ರವಾಡ, ಭೀಮು ಆಳಂದಕರ್, ಬಲೇಶಿ ನಾಕಮನ್, ಯಲ್ಲಪ್ಪ ಮಂದ್ರವಾಡ, ಶರಣಪ್ಪ ಜಮಖಂಡಿ, ಪರಶುರಾಮ ಡೊಲ್ಲೆ, ಮಲ್ಲಪ್ಪ ಹಂದನೂರ್, ಕಂಟೆಪ್ಪ ಹಂಚನಾಳ, ಬಸವರಾಜ ಕೊಳ್ಕೂರ್, ಸುಭಾಸ ನಿಲ್ಕೋಡ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ: ಸಿದ್ದನಗೌಡ ಬಿರೇದಾರ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ