ವಿಜಯಪುರ: ಪಟ್ಟಣದಲ್ಲಿ ಫೆ 4 ರಂದು ಕ್ರಾಂತಿ ವೀರರ ಬ್ರಿಗೇಡ್ ಸಂಘಟನೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಉದ್ಘಾಟನೆಗೊಳ್ಳುತ್ತಿರುವ ಹಿನ್ನಲ್ಲೆಯಲ್ಲಿ ವಿಜಯಪುರ ನಗರದ ಅಥಣಿ ರೋಡ. ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ರವಿವಾರ ದಿನಾಂಕ 5-1-2025 ಸಮಯ ಮುಂಜಾನೆ 9 ಘಂಟೆಗೆ
ಪೂರ್ವಭಾವಿ ಸಭೆ ಜರುಗಲಿದೆ.ಈ ಪೂರ್ವಭಾವಿ ಸಭೆಗೆ ಕೆ ಎಸ ಈಶ್ವರಪ್ಪ , ಅಧ್ಯಕ್ಷರಾದ ಬಸವರಾಜ ಬಾಳಿಕಾಯಿ ಹಾಗೂ ಕ್ರಾಂತಿ ವೀರರ ಬ್ರಿಗೇಡ್ ನ ರಾಜ್ಯ ಮತ್ತು ವಿಜಯಪುರ ಜಿಲ್ಲೆಯ ಮುಖಂಡರು ಭಾಗವಹಿಸಲಿದ್ದಾರೆ
ಆ ಸಭೆಗೆ ಬಸವಣ್ಣನವರ ಅನುಭವ ಮಂಟಪದಲ್ಲಿ ಭಾಗಿಯಾದ ಎಲ್ಲ ಸಮಾಜದ ವಚನಕಾರ ಸಮಾಜದವರು ಮತ್ತು ಅಭಿಮಾನಿಗಳು ಭಾಗವಹಿಸುವಂತೆ ಕ್ರಾಂತಿ ವೀರರ ಬ್ರಿಗೇಡ್ ನ ಮಾರ್ಗದರ್ಶಕ ಮಂಡಳಿಯ ಅಧ್ಯಕ್ಷರಾದ ಮಖಣಾಪುರ ಪೀಠದ ಶ್ರೀ ಸೋಮೇಶ್ವರ ಸ್ವಾಮಿಗಳು ಪತ್ರಿಕಾ ಪ್ರಕಟಣೆ ಮೂಲಕ ಕರೆ ನೀಡಿದ್ದಾರೆ.
ಹಿಂದು ಪರಂಪರೆ ಆಚರಣೆ ಮಾಡುವ ಎಲ್ಲ ವಚನ ಕ್ರಾಂತಿ ಶರಣ ಸಮಾಜದ ಬಂದುಗಳು
ಆಗಮಿಸಿ ಸಲಹೆ ಸೂಚನೆ ನೀಡಬೇಕು ಜೊತೆಗೆ ಹಿಂದು ಪರಂಪರೆ ಆಚರಣೆ ಮಾಡುವ ಸಮಾಜದ ಎಲ್ಲ ವರ್ಗದ ಸ್ವಾಮಿಜಿಗಳನ್ನು . ಶರಣ, ಸಂತರನ್ನು ಫೆ 4 ರಂದು ಉದ್ಘಾಟನೆಯ ದಿನದಂದು ಪಾದಪೂಜೆ ನೆರವೇರಿಸುವಂತಹ ಕಾರ್ಯಕ್ರಮ ಇದ್ದಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ
K,V,B ರಾಜ್ಯ ಪ್ರಧಾನ ಕಾರ್ಯದರ್ಶಿ ಅಮರೇಶಣ್ಣ ಕಾಮನಕೇರಿ ರವರು ಕ್ರಾಂತಿವೀರ ಬ್ರಿಗೇಡ್ ಸಂಘಟನೆಯ ಮುಖ್ಯ ಉದ್ದೇಶವೇ ಸರ್ವಸಮಾಜದವರಿಗೂ ಸಮಾನತೆ ನೀಡಲು ವಚನಕಾರರನ್ನು ಬಸವಣ್ಣ ನವರ ನೀಡಿದು ವಚನಕಾರರ ಹೆಸರಲ್ಲಿ ಎಲ್ಲ ಸಮಾಜದವರು ಸಮುದಾಯದ ಪೀಠಗಳನ್ನು ಕಟ್ಟಿಕೊಂಡಿದ್ದಾರೆ ಆ ಎಲ್ಲ ಪೀಠಗಳು ಹಿಂದು ಪರಂಪರೆ ಆಚರಣೆ ಮಾಡುತ್ತಿವೆ. ಕಲ್ಯಾಣ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರು ಹಾಕಿದ ಮಾರ್ಗದರ್ಶನದಲ್ಲಿ ಸಾಗುತ್ತಿವೆ ಆದರೆ ಕಲ್ಯಾಣ ಕ್ರಾಂತಿಯನ್ನು ಮಾಡಿದ ವಚನಕಾರರ ಪೀಠಗಳು ಮತ್ತು ಸಮಾಜವನ್ನು ಒಗ್ಗೂಡಿಸಿ ಸಮೃದ ಹಿಂದು ಪರಂಪರೆ ಕಟ್ಟಲು ಯಾರು ಕೆಲಸ ಮಾಡುತ್ತಿಲ್ಲ ಆದರಿಂದ ಹಿಂದು ಪರಂಪರೆ ಆಚರಣೆ ಮಾಡುವ ಎಲ್ಲ ಸಮಾಜವನ್ನು ಒಗ್ಗೂಡಿಸಿವ ಕೆಲಸವನ್ನು ಕ್ರಾಂತಿ ವೀರರ ಬ್ರಿಗೇಡ್ ಸೇವೆ ಮಾಡುತ್ತದೆ. ಹಿಂದು ಪರಂಪರೆ ಆಚರಣೆ ಮಾಡುವ ಸಮಾಜದ ಎಲ್ಲ ಪಂಗಡದವರು ಒಗ್ಗೂಡಿ ಹೋರಾಟ ಮಾಡಲಿಕ್ಕಾಗಿಯೇ ಆಗಿರುವುದರಿಂದ ಎಲ್ಲ ಸಮಾಜದವರು ಈ ಸಭೆಗೆ ಆಗಮಿಸಿ ಬೇಕು ಎಂದು ವಿನಂತಿಸಿದ್ದಾರೆ.
ವಿಶ್ವದಲ್ಲಿ ಎಲ್ಲ ಧರ್ಮದವರು ತಮ್ಮ ಸಂಘಟನೆಗಾಗಿ ಒಗ್ಗೂಡುವಂತಹ ಕಾರ್ಯ ಮಾಡಿ ತಮ್ಮ ಧರ್ಮದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಹಿಂದುಗಳು ಒಗ್ಗೂಡಿ ಹೋರಾಟ ಮಾಡಬೇಕೆಂಬ ಬಯಕೆ ಇದೆ ಆದರೆ ಎಲ್ಲ ಸಮಾಜದವರು ಕೂಡಿಕೊಂಡು ಹೋರಾಟ ಮಾಡದೆಯೇ ಬರಿ ಜಾತಿಯ ಅಭಿವೃದ್ಧಿಗೊಸ್ಕರ ಹೋರಾಟ ಮಾಡಿದ್ದಾರೆ ಅದಕ್ಕೆ ಹಿಂದು ಧರ್ಮದ ಉಳಿಸಿ-ಬೆಳೆಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಈ ಸಂಘಟನೆ ಉದ್ಘಾಟನೆ ಬಸವಾದಿ ಶರಣರ ನಾಡಿನಲ್ಲಿ ಆಗಬೇಕೆಂಬ ಉದ್ದೇಶವನ್ನು ಈಶ್ವರಪ್ಪನವರು ಹೊಂದಿದ್ದಾರೆ. ಅದಕ್ಕಾಗಿ ಈ ಸಂಘಟನೆಯ ಉದ್ಘಾಟನೆಯನ್ನು ಅಣ್ಣ ಬಸವಣ್ಣನ ಜನ್ಮಸ್ಥಳದಲ್ಲಿ ಫೆ.4 ರಂದು 5 ಲಕ್ಷ ಜನರು ಸೇರುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ ಎಂದು ಸಮಿತಿ ಸದಸ್ಯರಾದ ರಾಜು ಬಿರಾದರು ರಾಜಶೇಖರ ಯರನಾಳ ರವರು ಜಂಟಿಯಾಗಿ ತಿಳಿಸಿದ್ದಾರೆ