ಲಿಂಗಸೂಗೂರು : ತಾಲ್ಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ. ಸಿ. ಟ್ರಸ್ಟ್ ಹಾಗೂ ಜ್ಯಾನ ವಿಕಾಸ ಸಂಸ್ಥೆ. ಸಹಯೋಗದಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಯನ್ನು. ರೇಡ್ಡೆರ ಪತ್ತಿನ ಸಹಕಾರಿ ಬ್ಯಾಂಕನ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಲಿಂಗಸೂಗೂರು ಕ್ಷೇತ್ರದ ಶಾಸಕರಾದ ಮಾನಪ್ಪ ಡಿ ವಜ್ಜಲ ಜ್ಯೋತಿ ಬೆಳೆಗಿಸುವದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮಹಿಳೆಯರು ಸಂಘಟಿತರಾಗಿ ಕೌಶಲಾಭಿವೃದ್ದಿ ಬೆಳೆಸಿಕೊಳ್ಳುವ ಮೂಲಕ ಜ್ಞಾನವಂತರಾಗಬೇಕು. ಮಹಿಳೆಯರು ಹುಟ್ಟಿದ ಮತ್ತು ಮೆಟ್ಟಿದ ಎರಡು ಮನೆಗಳನ್ನು ಬೆಳಗುವ ನಂದಾದೀಪವಿದ್ದಂತೆ. ಮಹಿಳೆಯರು ಎಲ್ಲಾ ರಂಗದಲ್ಲೂ ಸಾಧನೆ ಮಾಡಬೇಕು ಎಂದು ಹೇಳಿದರು
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಮೋಹನ ನಾಯಕ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ರಾದ ಡಾ ಶಶಿಕಲಾ ಭೋವಿ ಅಯ್ಯಪ್ಪ ಮಾಳೂರು,ಗೋವಿಂದ ನಾಯಕ, ಮಹಮ್ಮದ್ ರಫೀ, ಗಿರಿ ಮಲ್ಲನ ಗೌಡ, ಹುಲ್ಲೇಶ ಸಾಹುಕಾರ, ಮುದುಕಪ್ಪ ನಾಯಕ. ನಾಗರತ್ನ ಗುತ್ತೆದಾರ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತಾಲೂಕಿನ ಎಲ್ಲಾ ಸಿಬ್ಬಂದಿ ವರ್ಗದವರು ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.