ಮರಳು ಗಣಿಗಾರಿಕೆ ವಿರೋಧಿಸಿ ಭಾಗೋಡಿ ಯಾತ್ರೆಗೆ ಬಿಜೆಪಿಯಿಂದ ಸಿದ್ದತೆ: ದೇವಿಂದ್ರ ದೇಸಾಯಿ

YDL NEWS
1 Min Read
ಅಫಜಲಪುರ: ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿ ಇಂದು ಮುಖ್ಯಮಂತ್ರಿ ಅಂದು ಮೈಸೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿದರು. ಈಗ ಅವರ ಅಧಿಕಾರವಧಿಯಲ್ಲಿಯೇ ಅವರ ಮಂತ್ರಿಗಳ ಕ್ಷೇತ್ರದಲ್ಲಿಯೇ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಅದನ್ನು ವಿರೊಧಿಸಿದರೇ ಸಿದ್ದರಾಮಯ್ಯ ಸರ್ಕಾರಕ್ಕೆ ಮುಜುಗರ ಏಕೆ? ಭಾಗೋಡಿಗೆ ಭೇಟಿ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಂದರೆ ವಿರೋಧಿಸುವ ಕಾಂಗ್ರೆಸ್ಸಿಗರಿಗೆ ನೈತಿಕತೆ ಇಲ್ಲವೇ? ಎಂದು ಬಿಜೆಪಿಯ ಓಬಿಸಿ ಮೋರ್ಚಾದ ನಗರಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಅವರು ಪತ್ರಿಕೆ ಹೇಳಿಕೆ ನೀಡಿದ್ದಾರೆ.
  ಅಂದು ಸಿದ್ದರಾಮಯ್ಯ ನವರು ಬಳ್ಳಾರಿಗೆ ಮೈಸೂರಿನಿಂದ ಪಾದಯಾತ್ರೆ ನಡೆಸಿದರು. ಯಾವುದಕ್ಕೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿರೋಧಿಸಿಲ್ಲ. ವಿರೋಧ ಪಕ್ಷದವರು ಪಾದಯಾತ್ರೆ ಮಾಡುತ್ತಾರೆ. ಅಧಿಕಾರದಲ್ಲಿರುವ ಪಕ್ಷದವರು ಅವರಿಗ ಸೂಕ್ತ ರಕ್ಷಣೆ ನೀಡುವದು ಕಾನೂನು ರೀತಿಯಾದ ಕರ್ತವ್ಯವಾಗಿದೆ. ಆದರೆ ಇಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಚಿತ್ತಾಪೂರ ಮತಕ್ಷೇತ್ರದಲ್ಲಿ ಹಾದು ಹೋಗುವ ಕಾಗಿಣ ನದಿಯ ಭಾಗೋಡಿಗೆ ಭೇಟಿ ನೀಡಲು ಮುಂದಾದರೇ ಸೂಕ್ತ ರಕ್ಷಣೆ ನೀಡಲಿಲ್ಲ ಏಕೆ?
ಕೆಲವರು ದಾರಿ ಮಧ್ಯೆ ರಸ್ತೆ ತಡೆದು ಸವಾಲು ಹಾಕಿದರು.
ದಕ್ಷ ಪೊಲೀಸರು ಎಚ್ಚತ್ತು ಕೊಳ್ಳದೇ ಸುಮ್ಮನಾಗಿರವುದು ಕಂಡರೆ ಚಿತ್ತಾಪೂರದಲ್ಲಿ ಎಗ್ಗಿಲ್ಲದೇ ಮರಳು ಮಾಫಿಯಾ ನಡೆಯುತ್ತಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. 
ಜಿಲ್ಲಾಡಳಿತ ತಕ್ಷಣ ಕಾಗಿಣಾ ನದಿಯಿಂದ ಹೊರ ತೆಗೆದ ಮರಳು ವಶಕ್ಕೆ ಪಡೆಯಬೇಕು. ಮರಳು ಮಾಫೀಯಾದಲ್ಲಿ ಇರುವ ಪತ್ತೆ ಹಚ್ಚಿ ಬಂಧಿಸಬೇಕು. ಇಲ್ಲವಾದರೆ ಭಾಗೋಡಿಗೆ ಪಾದಯಾತ್ರೆ ನಡೆಸಲು ಸಿದ್ದತೆ ಮಾಡಿಕೊಳ್ಳಬೇಕಾಗುತ್ತದೆ ಎಂದು ದೇವಿಂದ್ರ ದೇಸಾಯಿ ಕಲ್ಲೂರ ಎಚ್ಚರಿಸಿದ್ದಾರೆ.
–  ದೇವಿಂದ್ರ ದೇಸಾಯಿ ಕಲ್ಲೂರ ( ಬಿಜೆಪಿಯ ಓಬಿಸಿ ಮೋರ್ಚಾದ ನಗರಾಧ್ಯಕ್ಷರು ಕಲ್ಬುರ್ಗಿ)
.                                   
  • .

Share This Article