ಕಾನಿಪ ಧ್ವನಿ ಸುರಪುರ ತಾಲ್ಲೂಕು ಘಟಕ ರಚನೆ,ಸದಸ್ಯತ್ವದ ಐಡಿ ಕಾರ್ಡ್ ವಿತರಣೆ.!

YDL NEWS
1 Min Read

ಸುರಪುರ: ನಗರದ ಟೇಲರ್ ಮಂಜಿಲ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಐಡಿ ಕಾರ್ಡ್ ವಿತರಣೆ ಹಾಗೂ ಇದೇ 24ರಂದು ನಡೆಯುವ ಪತ್ರಕರ್ತರ ರಾಜ್ಯ ಸಮ್ಮೇಳನದ ಕುರಿತು ಸುದ್ದಿಗೋಷ್ಠಿ ನಡೆಸಲಾಯಿತು.

 

ಕಾನಿಪ ಧ್ವನಿ ಯಾದಗಿರಿ ಜಿಲ್ಲಾಧ್ಯಕ್ಷರದ ರಮೇಶ್ ಎನ್. ಸಾಹುಕಾರ ಅವರು ಮಾತನಾಡಿ,ನಮ್ಮ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರು ನೊಂದ ಪತ್ರಕರ್ತರ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದು, ನಾವೆಲ್ಲರೂ ಬೆಂಬಲವಾಗಿ ನಿಂತುಕೊಳ್ಳಬೇಕು ಎಂದರು.

 

ಇನ್ನು ಯಾದಗಿರಿ ಜಿಲ್ಲೆ ಸೇರಿ ತಾಲೂಕುಗಳಲ್ಲಿ ಇರುವ ಪತ್ರಿಕಾ ಭವನಗಳಲ್ಲಿ ಯಾವುದೇ ಹೆಸರಿರುವ ಬ್ಯಾನರ್ ಹಾಕುವಂತಿಲ್ಲ.ಜಿಲ್ಲಾ, ತಾಲ್ಲೂಕು ಪತ್ರಿಕಾ ಭವನ ಎಂದು ಆಗಬೇಕು ಎಂದರು.

 

ಇದೇ ವೇಳೆ ಮಾತನಾಡಿದ ಕಾನಿಪ ಧ್ವನಿ ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮೌನೇಶ ಬಿ. ಮಂಗಿಹಾಳ ಅವರು,ಸುರಪುರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ರಾಘು ಮಾಸ್ತರ ಅವರನ್ನು ನೇಮಕ ಮಾಡಿದ್ದು, ಉಪಾಧ್ಯಕ್ಷರಾಗಿ ಧರ್ಮರಾಜ,ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಭೀಮಾಶಂಕರ ಕರ್ನಾಳ ಸೇರಿ ಇನ್ನುಳಿದವರಿಗೆ ಸಂಘದ ಕೆಲ ಸ್ಥಾನಗಳು ನೀಡಿದ್ದೇವೆ ಎಂದರು.

 

ಇನ್ನು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ರಾಜ್ಯದ ನೊಂದ ಪತ್ರಕರ್ತರಿಗೆ ದಾರಿದೀಪವಾಗಿದ್ದು,ಕಾನಿಪ ಧ್ವನಿ ಜೊತೆಗೆ ರಾಜ್ಯದಲ್ಲಿರುವ ಎಲ್ಲಾ ಪತ್ರಕರ್ತರ ಏಳಿಗೆಗಾಗಿ ಶ್ರಮಿಸುತ್ತಿದ್ದು, ಗ್ರಾಮೀಣ ಭಾಗದ ಪತ್ರಕರ್ತರಿಗೆ ಬಸ್ ಪಾಸ್ ಸೇರಿ ಹಲವು ಸೌಲಭ್ಯ ಗಳು ದೋರುಕುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು.

 

ಇದಲ್ಲದೆ ಯಾದಗಿರಿ ಜಿಲ್ಲೆಯಲ್ಲಿರೋ ಪತ್ರಿಕಾ ಭವನಗಳು ಯಾವ ಸಂಘ ಸಂಸ್ಥೆಗಳ ಸ್ವತ್ತಲ್ಲ.ಸಂಘದ ಹೆಸರಿರುವ ನಾಮ ಫಲಕಗಳನ್ನು ತೆರವುಗೊಳಿಸಬೇಕು ಎಂದರು.

 

ಜಿಲ್ಲಾ ಪತ್ರಿಕಾ ಭವನ ಹಾಗೂ ತಾಲ್ಲೂಕು ಪತ್ರಿಕಾ ಭವನ ಎಂದು ಆಗಬೇಕು ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಾಲ್ಲೂಕಿನ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುತ್ತೇವೆ ಜೊತೆಗೆ 15ದಿನಗಳವರೆಗೆ ಗಡವು ನೀಡುತ್ತೇವೆ ಅಧಿಕಾರಿಗಳು ಕೆಲಸ ಮಾಡದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.

 

ಈ ಸಂದರ್ಭದಲ್ಲಿ ಪತ್ರಕರ್ತರಾದ ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ, ಮದನಲಾಲ ಕಟ್ಟಿಮನಿ, ಪರಮಾತ್ಮ, ವೆಂಕಟೇಶ ದೊಡ್ಮನಿ ಸೇರಿ ಇತರರು ಇದ್ದರು

Share This Article