ಯಾದಗಿರಿ : ಕೇಂದ್ರ ಹಾಗೂ ರಾಜ್ಯ ಗೃಹ ಸಚಿವಾಲಯದ ಸೂಚನೆ ಮೇರೆಗೆ ಹಮ್ಮಿಕೊಳ್ಳಲಾದ ಆಪರೇಷನ್ ಅಭ್ಯಾಸ ಹೆಸರಿನ ಅಣಕು ಪ್ರದರ್ಶನ ಯಶಸ್ವಿ ನಿರ್ವಹಣೆಗೊಂಡಿದೆ ಎಂದು ಜಿಲ್ಲಾಧಿಕಾರಿ ಸುಶೀಲ ಬಿ. ಅವರು ತಿಳಿಸಿದರು. ಸ್ಥಳದಲ್ಲಿಯೇ ಉಗ್ರರನ್ನು ಹಿಡಿದ ಪೊಲೀಸ್ ಅಧಿಕಾರಿಗಳು.
ಬಾಂಬ್ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿ ಮೈದಾನದ ಕಟ್ಟಡವೊಂದರಲ್ಲಿ ಅವಿತು ಕುಳಿತಿದ್ದ ಇಬ್ಬರು ಉಗ್ರರಾದ ಅಜಮೋದ್ದಿನ್ ಮತ್ತು ರುಕ್ಕಮೊದ್ದಿನ್ ಎಂಬ ಉಗ್ರರರನ್ನು ಪೊಲೀಸ್ ಅಧಿಕಾರಿಗಳಾದ ರಮೇಶ, .. ನೇತೃತ್ಚದ ತಂಡ ಹುಡುಕಿ ಹೆಡೆಮುರಗಿ ಕಟ್ಟಿ ಎಳೆದು ತಂದು ಬಾಯಿ ಬಿಡಿಸಿದರು. ಆಗ ಅವರು ಜಮ್ಮು ಕಾಶ್ಮೀರದವರೆಂದು ಬಾಯಿ ಬಿಟ್ಟರು. ಅವರಲ್ಲಿ ಪಿಸ್ರೂಲ್ ಸೇರಿದಂತೆಯೇ ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಬಂಧಿಸಿದರು.