ಯಾದಗಿರ
ಸುರಪೂರ ತಾಲೂಕಿನ ಏವೂರು ಗ್ರಾಮದ ಬಸನಗೌಡ ತಂದೆ ಮಡಿವಾಳಪ್ಪ ಗೌಡ ಈರಣ್ಣ ಗೌಡರ್ ಮತ್ತು ಶಿವಪ್ಪ ತಂದೆ ರಾಯಪ್ಪ ನಾಟಿಕರ್ ಇವರು ರೈತರಿಗೆ ಮೋಸ ವಂಚನೆ ಮಾಡಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಿಮಗೆ ಫಾರಂ ನಂಬರ್ 10 ಮಾಡಿಸಿಕೊಡುತ್ತೇವೆ ಮತ್ತು ಸರ್ವೆ ಮಾಡಿಸುತ್ತೇವೆಂದು ಪ್ರತಿಯೊಬ್ಬ ರೈತರಿಗೆ ಅಕ್ರಮವಾಗಿ 20000 ರೂಪಾಯಿಗಳಂತೆ ಹಣ ಪಡೆದುಕೊಂಡು ಮೋಸ ಮಾಡಿ ಅಧಿಕಾರಿಗಳಿಗೆ ಲಂಚದ ಆಸೆ ಹಚ್ಚಿ ರೈತರಿಗೆ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ಇವರುಗಳ ಮೇಲೆ ಕಲಂ 420 ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಕೆ ಆರ್ ಆರ್ ಎಸ್ ಹಾಗೂ ರೈತ ಸೇನೆ ಗ್ರಾಮ ಘಟಕದ ಅಧ್ಯಕ್ಷರಾದ ದೇವೇಂದ್ರಪ್ಪ ದೊರೆಯವರು ಆಗ್ರಹಿಸಿದ್ದಾರೆ
ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರವಾದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ