*ಭಾರತ ಸ್ವತಂತ್ರ ಸಂಗ್ರಾಮದ ಕ್ರಾಂತಿಕಾರಿ ಭಗತ್ ಸಿಂಗ್* 

YDL NEWS
2 Min Read

 ಭಗತ್ ಸಿಂಗ್ ರವರ ಕೊನೆಯ ದಿನಗಳಲ್ಲಿ ಸಂಘಟನೆಯ ಬಹುತೇಕ ಮಂದಿ ಸೆರೆಮನೆಯಲ್ಲಿ ನ್ಯಾಯಾಲಯದ ಕುರಿತು ಚರ್ಚಿಸುತ್ತಿದ್ದಾಗ ರಾಜಗುರು ಮತ್ತು ಭಗತ್ಸಿಂಗ್ರಿಬ್ಬರೂ ಗಲ್ಲಿಗೇರುವುದು ಖಚಿತವೆಂದು ತಿಳಿದಿದ್ದರಿಂದ ಅವರನ್ನು ಹೊರತುಪಡಿಸಿ ತಮಾಷೆಗಾಗಿ ಒಬ್ಬರ ಮೇಲೊಬ್ಬರು ಗಲ್ಲು ಶಿಕ್ಷೆ ವಿಧಿಸಿಕೊಂಡು ನಗೆಯಾಡುತ್ತಿದ್ದರು ಎಂದು ವಿಶ್ವ ಪಂಡಿತ್ ನಾಲ್ವರು ಮಾತನಾಡಿದರು. 

 

ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಭಗತ್ ಸಿಂಗ್ ವೃತ್ತ ಉದ್ಘಾಟಿಸಿ ಸಮುದಾಯ ಭವನದಲ್ಲಿ ವಿದ್ಯಾರ್ಥಿಗಳಿಗಾಗಿಯೇ ಸಾಂಸ್ಕೃತಿಕ ಕಾರ್ಯಕ್ರಮ ವೇಧಿಕೆಯಲ್ಲಿ ಮಾತನಾಡಿ, ಯಾರಲ್ಲಿಯೂ ಉತ್ತರವಿಲ್ಲದೆ ನಿಶ್ಯಬ್ಧ, ನಿರ್ಲಿಪ್ತತೆ ಆವರಿಸಿದವು. ಮತ್ತಷ್ಟು ಛೇಡಿಸುವ ಧ್ವನಿಯಲ್ಲಿ ವಾಸ್ತವವನ್ನು ಗುರುತಿಸಲು ಭಯವೇ ಎಂದು ಭಗತ್ ನುಡಿದಾಗ ಇನ್ನಷ್ಟು ನಿಶ್ಯಬ್ಧ ಮನೆಮಾಡಿ ಸೂತಕದ ವಾತಾವರಣ ಉಂಟಾಯಿತು. ನಿಶ್ಯಬ್ಧ ಮತ್ತು ಮೌನವನ್ನು ತನ್ನ ನಗುವಿನಿಂದ ಭೇಧಿಸುತ್ತಾ ಹೇಳಿದ. ನಾವು ಸಾಯೋವರೆಗೆ ಕುತ್ತಿಗೆಗೆ ಕುಣಿಕೆ ಬೀರಿ ನಮ್ಮನ್ನು ನೇತು ಹಾಕುವುದು ನಿಜ, ಇದು ನನಗೂ ಗೊತ್ತು. ನಿಮಗೂ ಗೊತ್ತು ಎಂದು ಹೇಳಿದವರು ಭಗತ್ ಸಿಂಗ್.

 

 

ರಾಷ್ಟ್ರಾಭಿಮಾನಕ್ಕಾಗಿ ಸಿಗುವ ಅತ್ಯುನ್ನತ ಬಹುಮಾನ ಅದು ನನಗೇ ಸಿಗುತ್ತಿರುವುದರಿಂದ ನನಗೆ ಹೆಮ್ಮೆ ಇದೆ. ನನ್ನ ಬಾಹ್ಯ ದೇಹವನ್ನು ನಾಶಗೊಳಿಸಿ ಈ ರಾಷ್ಟ್ರದಲ್ಲಿ ಅವರು ಸುರಕ್ಷಿತವಾಗಿರಬಹುದೆಂದು ಭಾವಿಸಿದ್ದಾರೆ. ಅದು ಅವರ ಕಲ್ಪನೆಯಷ್ಟೆ. ಅವರು ನನ್ನನ್ನು ಕೊಲ್ಲಬಹುದು. ಆದರೆ ನನ್ನ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ವಿಚಾರಗಳಿಗೆ ಸಾವಿಲ್ಲ, ಸಿದ್ದಾಂತಗಳಿಗೆ ಅಳಿವಿಲ್ಲ. ಅವರು ನನ್ನ ದೇಹವನ್ನು ಪುಡಿಗಟ್ಟಹುದು. ಆದರೆ ನನ್ನ ಚೈತನ್ಯವನ್ನು ಪುಡಿಗಟ್ಟಲಾರರು ಎಂದು ಭಗತ್ ಸಿಂಗ್ ಜೀವನ ಕುರಿತು ವಿವರಿಸಿದರು.

 

 

ಹಳ್ಳಿ ಭಾಗದ ವಿದ್ಯಾರ್ಥಿಗಳಿಗಾಗಿಯೇ ಸಾಂಸ್ಕೃತಿಕ ಕಾರ್ಯಕ್ರಮ ವೇಧಿಕೆ ಏರ್ಪಡಿಸಲಾಯಿತು ಇದರಲ್ಲಿ ನೃತ್ಯ, ಹಾಡು, ಮಿಮಿಕ್ರಿ ,ಭಾಷಣ, ಇತ್ಯಾದಿ ಕಾರ್ಯಕ್ರಮಗಳು ಮಕ್ಕಳಿಗಾಗಿ ಏರ್ಪಡಿಸಿತ್ತು. ಭಗತ್ ಸಿಂಗ್ ರವರ ಭಾವಚಿತ್ರವನ್ನು ಪೇಂಟಿAಗ್ ಮಾಡಿದ ಯುವ ಚಿತ್ರಕಾರ ಭೀಮರಾಯ ದಿಗ್ಗಿ ದೋರನಹಳ್ಳಿ ಗ್ರಾಮದ ಯುವಕರು ಹಾಗೂ ಹಿರಿಯ ಮುಖಂಡರಿದ್ದರುದ ಗೌರವಿಸಲಾಯಿತು. 

 

 

ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಯ ತಾಲೂಕು ಕಾರ್ಯದರ್ಶಿ ವೆಂಕಟೇಶ್ ನಾಲ್ವರ್. ಯಂಕಪ್ಪ ಆಶಿನಾಳ ,ಸಕ್ರಪ್ಪ ಮೇಲಾಗಿರಿ, ಮರೇಪ್ಪ ನಾಲ್ವರ, ಭಾಗರೆಡ್ಡಿ ರಸ್ತಾಪುರ್, ಸಿದ್ದಾರೂಡ ಅಲ್ಲೂರ್ , ದೇವು ತುಕ್ಕನರ್, ವಿಶ್ವ ಪಂಡಿತ್ ನಾಲ್ವರು, ಇತರರು ಇದ್ದರು.

Share This Article