ಚಡಚಣ ನ್ಯೂಸ್…
ಸತತ ಮೂರನೇ ಬಾರಿ ಪಟ್ಟಣಕ್ಕೆ ಆಗಮಿಸಿದ ಪಿಎಸ್ಐ ಯಲಗಾರ ಅವರಿಗೆ ಮೆಚ್ಚುಗೆಯ ಸ್ವಾಗತ.
ಚಡಚಣ ಪಟ್ಟಣದ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿ ಕಾರ್ಯನಿರ್ವಹಿಸಲು ಆಗಮಿಸಿದ ಪಿಎಸ್ಐ ಮಹದೇವ ಯಲಗಾರ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ಪಟ್ಟಣದ ಐಬಿ ಇಂದ ಪೊಲೀಸ್ ಠಾಣೆವರೆಗೂ ಮೆರವಣಿಗೆ ಕಾರ್ ಜಿಪ್ ಮೂಲಕ ಇಲ್ಲಿ ಜನ ಅವರನ್ನು ಹಿಂಬಾಲಿಸಿ ಪ್ರೋತ್ಸಾಹಿಸಿದರು. ಅನೇಕರು ಹೊ ಗುಚ್ಛ ನೀಡುವ ಮೂಲಕ ಅವರಿಗೆ ಸಂಕೇತಿಕ್ ಸ್ವಾಗತ ನೀಡಿದರು. ಯಲಗಾರ ಅವರು ಠಾಣೆಯಲ್ಲಿ ಪೂಜೆ ಮಾಡುವ ಮೂಲಕ ಕಾರ್ಯಕ್ಕೆ ಹಾಜರಾದರು. ಈ ವೇಳೆ ಗ್ರಾಮಸ್ಥರ ಪ್ರೀತಿ ಕಂಡು ಹರ್ಷ ವ್ಯಕ್ತ ಪಡಿಸಿದರು. ಇಲ್ಲಿ ಇವರಿಗೆ ಠಾಣಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಜೊತೆ ನಿಂತು ಸಂತೋಷದಿಂದ ಫೋಟೋ ಕ್ಲಿಕ್ಕಿಸಿಕೊಂಡರು.
ವರದಿ:ಉಮೇಶಗೌಡ ಹಿಂಗಣಿ
RV ಟಿವಿ ಕನ್ನಡ ನ್ಯೂಸ್ ಚಡಚಣ