ಕರ್ನಾಟಕ ಜನ ಬೆಂಬಲ ವೇದಿಕೆಯ ಪರತಹಬಾದ ಸರ್ಕಲ್ ಅಧ್ಯಕ್ಷರಾಗಿ ಮೇರಾಜ್ ಜೋಗೂರ ಆಯ್ಕೆ
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕರ್ನಾಟಕ ಜನ ಬೆಂಬಲ ವೇದಿಕೆಯ ಪರತಹಬಾದ ವಲಯ ಅಧ್ಯಕ್ಷರಾಗಿ ಮೇರಾಜ್ ಜೋಗೂರ್ ಇವರನ್ನು ತಾಲೂಕ ಅಧ್ಯಕ್ಷರಾದ್ ಉಮೇಶ ಅಂದೋಡಗಿ ಅವರು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ವಲಯ ಮಟ್ಟದಿಂದ ಜಿಲ್ಲಾ ಮಟ್ಟದ ವರೆಗೆ ಹೋಗುವ ಉತ್ಸಾಹಿಗಳು ತಾವು ಆಗಬೇಕು . ನಾಡು-ನುಡಿ ಜಲ ಭಾಷೆಗಾಗಿ ಶ್ರಮಿಸುತ್ತ ಸಂಘಟನೆ ಬಲಪಡಿಬೇಕು ಎಂದು ಅಂದೋಡಗಿ ಮಾತನಾಡಿದ್ದರು. ಇದೇ ಸಂದರ್ಭದಲ್ಲಿ ಬಡದಾಳ ವಲಯ ಉಪಾಧ್ಯಕ್ಷರಾದ್ ಮಲ್ಲಿಕಾರ್ಜುನ ದುತ್ತರಗಾಂವ, ತಾಲೂಕ ಉಪಾಧ್ಯಕ್ಷರಾದ್ ಸಾಗರ್ ಸಂಗೋಳ್ಳಗಿ, ಕರಜಗಿ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷರಾದ್ ಸಿದ್ದರಾಮ ಬೆನ್ನೂರ್, ಸಿದ್ದು ದುದ್ದಗಿ, ಶ್ರೀಶೈಲ ಗೌರ, ಮತ್ತು ಇನ್ನಿತ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.