ಯಾದಗಿರಿ ಜಿಲ್ಲೆಯ ಸುರಪುರ ನಗರದ ಟೇಲರ್ ಮಂಜಿಲ್ ನಲ್ಲಿ ಇಂದು ದಲಿತ ಸೇನೆ ಯಾದಗಿರಿ ಜಿಲ್ಲಾಧ್ಯಕ್ಷ ಅಶೋಕ್ ಹೊಸಮನಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ದೇವರಗೋನಾಲ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ದಲಿತ ಸೇನೆ ನೂತನ ತಾಲೂಕು ಅಧ್ಯಕ್ಷ ಮರಿಲಿಂಗ ಗುಡಿಮನಿ ಅವರು ಮಾತನಾಡುತ್ತಾ ನಾವೆಲ್ಲರೂ ದಲಿತ ಸೇನೆ ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ದರಾಗಿರಬೇಕು, ಅನ್ಯಾಯದ ವಿರುದ್ಧ ಹೋರಾಡೋಣ ಇಡೀ ತಾಲೂಕಿನಾದ್ಯಂತ ಭ್ರಷ್ಟಾಚಾರ ತಾಂಡವಾಡುತ್ತಾ ಇದೆ.
ಸಾಮಾನ್ಯ ಜನರು ಮೋಸ, ವಂಚನೆಗೆ ಬಲಿಯಾಗುತ್ತಿದ್ದಾರೆ ಅದನ್ನು ನಾವೆಲ್ಲರೂ ಒಗ್ಗಟ್ಟಿನಿಂದ ತಡೆಯಲು ಮುಂದಾಗಬೇಕು ಎಂದರು.
*ವರದಿ : ಮೌನೇಶ ಆರ್ ಭೋಯಿ.*