ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 16 ರಲ್ಲಿ ಬರುವ ಅಂಬೇಡ್ಕರ್ ಕಾಲೋನಿಯಲ್ಲಿರುವ.
ಸುವರ್ಣ ಕರ್ನಾಟಕ 2006 ರ ಯೋಜನೆಯಡಿಯಲ್ಲಿ ನಿರ್ಮಾಣವಾದ ನಮ್ಮೂರು ಕಿರಿಯ ಪ್ರಾಥಮಿಕ ಶಾಲಾ ಕಟ್ಟಡವು.ನಿರ್ಮಾಣಗೊಂಡು ಸುಮಾರು 17 ವರ್ಷಗಳು ಕಳೆದು ಹೋಗಿವೆ.
ಆದರೆ ಸುಮಾರು ಮೂರು ನಾಲ್ಕು ವರ್ಷಗಳಿಂದ ಈ ಒಂದು ಶಾಲಾ ಕಟ್ಟಡದ ಕೋಣೆಗಳು & ಆವರಣ ಮಳೆಗಾಲ ಬಂತೆಂದರೆ ಕೆಸರು ಗದ್ದೆಯಂತೆ ಕಾಣುತ್ತವೆ.
ಈ ಒಂದು ಶಾಲೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಹಲವಾರು ಬಾರಿ ಮೌಖಿಕವಾಗಿ ,ಲಿಖಿತರೂಪದಲ್ಲಿ ಮನವಿ ಮಾಡಿಕೊಂಡರು ಕೂಡಾ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳಾಗಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸೌಜನ್ಯಕ್ಕಾದರೂ ಭೇಟಿ ನೀಡದೆ ಇರುವುದನ್ನು ನೋಡಿದರೆ ವಿಪರ್ಯಾಸವೆ ಸರಿ!
ಶಾಲಾ ಆವರಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಳಚೆ ನೀರು ನಿಂತು ಗಬ್ಬೆದ್ದು ನಾರುತ್ತಿದ್ದು, ಶೌಚಾಲಯಗಳು ಅಂತು ಆಟಕ್ಕುಂಟು ಲೆಕ್ಕಕ್ಕಿಲ್ಲವೆಂಬಂತಾಗಿದೆ.
ಎಂದು ದಲಿತ ಸೇನೆ ಮುಖಂಡ ಪರಶುರಾಮ ಬೊಮ್ಮನಹಳ್ಳಿ ಅವರು ಶಾಲಾ ಮೇಲುಸ್ತುವಾರಿ ಸಮಿತಿ, ಅಧಿಕಾರಿಗಳ ವಿರುದ್ದ ತೀವ್ರ ಬೇಸರ ವ್ಯಕ್ತಪಡಿಸುತ್ತಾ ಕೂಡಲೇ ಹಳೆಯ ಶಾಲಾ ಕಟ್ಟಡವನ್ನು ನವೀಕರಣಗೊಳಿಸಿ ಶಾಲಾ ಮಕ್ಕಳನ್ನು ನಿರ್ಭಿತವಾಗಿ ಶಾಲೆಗೆ ಪಾಲಕರು ಕಳಿಸುವಂತೆ ಅನುಕೂಲ ಮಾಡಿಕೊಡಬೇಕೆಂದು
ಮಾಧ್ಯಮ ಹೇಳಿಕೆ ನೀಡುವುದರ ಮೂಲಕ ಆಗ್ರಹ ಮಾಡಿದರು.
*ವರದಿ : ಮೌನೇಶ ಆರ್ ಭೋಯಿ.*