ಪ್ರಕಾಶ ಜಮಾದಾರ ಅವರಿಗೆ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ:- ಈರಣ್ಣ ಹೊಸಮನಿ.

Ravikumar Badiger
1 Min Read

ಅಫಜಲಪುರ:- ತಾಲ್ಲೂಕಿನ ರಾಜಕೀಯ ಕ್ಷೇತ್ರದಲ್ಲಿ ಹಿರಿಯ ನಾಯಕರು,ಕಾಂಗ್ರೇಸ್ ಪಕ್ಷದ ನಿಷ್ಠಾವಂತ ನಾಯಕರು, ಸಮಾಜ ಮುಖಿ ಕಳಕಳಿ ಉಳ್ಳವರು ಹಾಗೂ ಕೋಲಿ ಸಮಾಜದ ಹಿರಿಯ ಮುಖಂಡರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಪ್ರಕಾಶ್ ಜಮಾದಾರ ಅವರಿಗೆ ನಿಜ ಶರಣ ಅಂಬಿಗರ ಚೌಡಯ್ಯನವರ ಅಭಿವೃದ್ಧಿ ನಿಗಮ ಅಧ್ಯಕ್ಷರು ಮಾಡಬೇಕೆಂದು ಕಾಂಗ್ರೆಸ್ ಪಕ್ಷದ‌ ವರಿಷ್ಠರಿಗೆ ತಳವಾರ ಸಮಾಜ ಎಸ್.ಟಿ ಹೊರಟ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಈರಣ್ಣ ಹೊಸಮನಿಯವರು ಮನವಿ ಮಾಡಿದ್ದರು.

ಇದಲ್ಲದೆ ಪ್ರಕಾಶ್ ಜಮಾದಾರ ಅವರು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಶ್ರಮಿಸುತ್ತಾ ಬಂದಿದ್ದಾರೆ 2023 ಚುನಾವಣೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿ ಅಫಜಲಪುರದಲ್ಲಿ ಎರಡು ಸಲ ಎಮ್ .ವಾಯ್ ಪಾಟೀಲ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

Prakash Jamadar Kallur

Share This Article