ಅಫಜಲಪುರ:- ಪಟ್ಟಣದ ಹೊರವಲಯದಲ್ಲಿ ಇರುವ ಡಿಸಿಸಿ ಬ್ಯಾಂಕ್ ನ ಸದಸ್ಯರಾದ ಮಾಂತೇಶ ಗುಣಾರಿ ಅವರು ತಮ್ಮ 39 ನೇ ಜನ್ಮ ದಿನವನ್ನು ವಿಶೇಷ ಮಕ್ಕಳ ಜೊತೆ ಸಿಹಿ ಹಂಚಿಕೊಂಡು ಜನ್ಮದಿನವನ್ನು ಆಚರಿಸಿದ್ದಾರೆ. ತಮ್ಮ ಜನ್ಮದಿನದ ನಿಮಿತ್ತವಾಗಿ ಗ್ರೈಂಡರ್ ಮಸಿನ್ ಅನ್ನು ಅಂದ ಮಕ್ಕಳ ಶಾಲೆಗೆ ನೀಡಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಮಾಂತೇಶ ಗುಣಾರಿ ಅವರು ಮಕ್ಕಳನ್ನು ದೈವ ಸಮಾನ ಎನ್ನುತ್ತಾರೆ. ಹಾಗಾಗಿ ದೈವ ಸಾನಿಧ್ಯದಲ್ಲಿ ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸಿಕೊಂಡಿದ್ದೇನೆ. ಆ ಮಕ್ಕಳೊಂದಿಗೆ ಕಳೆಯುವ ಕ್ಷಣಗಳನ್ನು, ಆ ಅನುಭವವನ್ನು ವಿವರಿಸುವುದು ಅಸಾಧ್ಯ ಎಂದಿದ್ದಾರೆ. ಇದಲ್ಲದೆ ನಾನು ತಾಯಿಯನ್ನು ಕಳೆದುಕೊಂಡಿದೆನೆ ಇಗ ನನ್ನ ತಾಯಿಯನ್ನು ಈ ಮಕ್ಕಳಲ್ಲಿ ಕಾಣುತ್ತಿದೆನೆ ಎಂದು ಬಾವುಕರಾದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಶಿವಾನಂದ ಸಲಗಾರ,ಸೈದಪ್ಪಾ ಪೂಜಾರಿ, ಪೀರೊಜ್ ಪಟ್ಟಣ್, ಮಹೇಶ್ ಬೂಯಾರ್, ರವಿ ಕಿರಣ ಬಟ್ ಜೇವರ್ಗಿ, ಬಸ್ಸು ಮಲಗಾಣ,ಚಂದ್ರಕಾಂತ ಉಡಚಾಣ ಹಾಗೂ ಬಸ್ಸು ನಾಗುರ ಸೇರಿದಂತೆ ಅನೇಕರು ಭಾಗಿಯಾಗಿದ್ದರು.