ಯಾದಗಿರಿ ಜಿಲ್ಲೆಯಾದ್ಯಂತ ದಿನಾಂಕ 04-08-2023 ರಂದು ಅಧ್ಯಕ್ಷ & ಉಪಾಧ್ಯಕ್ಷ ಎರಡನೇ ಅವಧಿಗೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಬಹಳಷ್ಟು ಸದ್ದು ಮಾಡ್ತಾ ಇದೆ ಎಂದರೆ ತಪ್ಪಾಗಲಾರದು ಸುರಪುರ ತಾಲೂಕಿನ ದೇವಾಪುರ ಗ್ರಾಮ ಪಂಚಾಯತ್ ನ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರುಗಳಾದ ಮೌನೇಶ ಶೆಳ್ಳಗಿ, ರೇಣುಕಾ ಶಂಕರ್ ಗೌಡ,ಅವರು ಇಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನರಸಿಂಹ ನಾಯಕ್ (ರಾಜುಗೌಡ) ಅವರ ನೇತೃತ್ವದಲ್ಲಿ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ದೇವಾಪುರ ಗ್ರಾಮದ ಭಾರತೀಯ ಜನತಾ ಪಕ್ಷದ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
*ವರದಿ : ಮೌನೇಶ ಆರ್ ಭೋಯಿ.*