ಸಂಚಾರಿ ಕುರಿಗಾಹಿಳ… ಕಷ್ಟದ ಬದುಕು!

Ravikumar Badiger
2 Min Read

ಕುರಿಗಾಹಿಳ… ಕಷ್ಟದ ಬದುಕು!

  • ಈ ಸಂಚಾರಿ ಕುರಿಗಾಹಿಳಿಗೆ ಅಕಾಶವೆ ಹೊದಿಕೆ ಭೂಮಿಯೆ ಹಾಸಿಗೆ! ಬಯಲು ಸೀಮೆಯಲ್ಲಿ ಊರೂರು ಅಲೆದಾಟ ಕುರಿ ಹೊಟ್ಟೆ ತುಂಬಿಸಲು ಹುಟ್ಟೂರು ಬಿಟ್ಟು ದೂರದ ಊರಿಗೆ ಪಯಣ ಬೆಳೆಸುವ ಇವರ ಮಕ್ಕಳ ಶಿಕ್ಷಣ ಕನಸಿನ ಮಾತು ಬೇಸಿಗೆಯಲ್ಲಿ ಮೆವಿನ ಕೊರತೆ ಮಳೆಗಾಲದಲ್ಲಿ ಕುರಿ ಸಂರಕ್ಷಣೆ ಕೊರತೆ ಇದೆಲ್ಲ ಒಂದೆಡೆಯಾದರೆ ರಾತ್ರಿ ಕುರಿ ಕಳ್ಳರ ಸಮಸ್ಯೆ ಇಂಥ ಸಂಚಾರಿ ಕುರುಬರ ಬದುಕಿನ ಕಷ್ಟ ಅಸ್ಟಿಸ್ಟಲ್ಲ.. ಹೋದ ಊರಲ್ಲಿ ಬೈಗುಳಗಳೆ ಇವರಿಗೆಲ್ಲ ಪುರಸ್ಕಾರ ಸರಕಾರದ ಸವಲತ್ತು ದೂರದ ಮಾತಾಗಿದೆ.

ಹೌದು,,, ಬೆಳಗಾವಿ ಜಿಲ್ಲೆ ಕಾಗವಾಡ ಮತಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಕುರಿಗಾಹಿಯೊಬ್ಬ ತನ್ನ ಅಳಲನ್ನ ತೋಡಿಕೊಂಡಿದ್ದಾನೆ.

ಸರಕಾರದ ಸವಲತ್ತುಗಳು ನಮಗೆ ಗೊತ್ತೆ ಇಲ್ಲಾ ನೂರಾರು ಕುರಿಗಳು ಸಾಂಕ್ರಾಮಿಕ ರೋಗದಿಂದ ಬಲಿಯಾಗುತ್ತವೆ ಪೂರಕ ಔಷಧಿ ಸಿಗುತ್ತಿಲ್ಲ..
ಸರಕಾರ ಪ್ರತಿ ವರ್ಷ ರೈತರ ಮನೆ ಜಾನುವಾರುಗಳಿಗೆ ಲಸಿಕೆ ನೀಡುತ್ತೆ ಆದರೆ ನಾವು ದುಡ್ಡು ಕೊಟ್ಟು ತಂದರು ರೋಗಕ್ಕೆ ತುತ್ತಾಗಿ ಕುರಿಗಳು ಜೀವ ಕೆಳೆದುಕೊಳ್ಳುತ್ತವೆ.

ಮಳೆಗಾಲದಲ್ಲಿ ಚಿಗುರು ಮೆವು ತಿಂದು ಕುರಿಗಳಿಗೆ ಭೇದಿ ಶುರುವಾದಾಗ ಅವುಗಳ ಸಂರಕ್ಷಣೆಗೆ ಅರ್ಧ ಕುರಿಗಳನ್ನು ಮಾರಿ ಔಷಧೋಪಚಾರ ಮಾಡುವ ಪರಿ ತಪ್ಪಿದ್ದಲ್ಲ.

ನಮಗಂತೂ ನಿಂತಲ್ಲೆ ಊಟ ನಿಲ್ಲಲ್ಲೂ ವೆವಸ್ಥಿತ ಸುರಿಲ್ಲ ಮಳೆಯಲ್ಲಿ ನೆನೆದು ಜ್ವರ ಬಂದರು ನಮಗೆ ಕೇಳೋಕೆ ಯಾರಿದ್ದಾರೆ ಸ್ವಾಮಿ ಎಂದು ಕುರಿಗಾಹಿ ತನ್ನ ಅಳಲು ತೋಡಿಕೊಂಡಿದ್ದಾನೆ

*ಬೈಟ್* ಮಾಯಪ್ಪ ಗಾವಡೆ. ಕುರಿಗಾಹಿ

ಹೊಲ ಗದ್ದೆ ಬದುವಿಗೆ ರೈತರು ಕಳೆನಾಶಕ ಸಿಂಪಡನೆಯಿಂದ ಕುರಿಗಳು ಹುಲ್ಲು ತಿಂದು ಸಾಯಿವುದು ಸರ್ವೇ ಸಾಮಾನ್ಯವಾಗಿದೆ ಅದಕ್ಕೆ ಪರಿಹಾರ ದೂರದ ಮಾತಾಗಿದೆ…

ಈ ಹಿಂದೆ ಶಿದ್ದು ಸರ್ಕಾರ ಇಂಥಹ ಕುರಿಗಾಹಿಗಳಿಗೆ ಕಂಬಳಿ, ಖಂಧಿಲು, ಹೊದಿಕೆ ಹಾಗೂ ಹಲವು ಕಿಟ್ ವೆವಸ್ಥೆ ಕಲ್ಪಿಸಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಯಾವ ಸೌಲಭ್ಯವು ಒದಗದೆ ಸಂಕಷ್ಟಪಡುವಂತಾಗಿದೆ

ಇಂಥ ಕುರಿಗಾಹಿಗಳ ಬದುಕಿಗೆ ಸರ್ಕಾರ ಆಸರೆಯಾಗಬೇಕಿದೆ ಸರ್ಕಾರ ಪ್ರತಿ ಕುರಿಗು ಪ್ರತ್ತೇಕ ವಿಮೆ ಘೋಷಣೆ ಜೊತೆಗೆ ಕುರಿ ಮೆಕೆಗಳಿಗೆ ವಾರ್ಷಿಕ ಮೇವು ಪಶು ಖಾದ್ಯ ಪೂರೈಕೆಯ ಜೊತೆಗೆ ಸಾವು ನೋವು ಸಂಭವಿಸಿದ್ದಲ್ಲಿ ನೇರವಾಗಿ ಅವರ ಖಾತೆಗೆ ಪರಿಹಾರದ ಜೊತೆ ಕುರಿಗಾಹಿಳಿಗೆ ಪ್ರತ್ತೇಕ ಕಿಟ್ ವದಗಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.

*ಬೈಟ್* ಮಹಾದೇವಿ… ಕುರಿಗಾಹಿ ಪತ್ನಿ.

*ವರದಿ.. ರಮೇಶ ಕೆ ಕನ್ನಡ ನ್ಯೂಸ್ ಟೂಡೇ **

Share This Article