ಪರತಾಬಾದ ಗ್ರಾಮ ಪಂಚಾಯಿತಿ ಎರಡನೇ ಅವಧಿಯ ನೂತನ
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ.
ಕಲಬುರಗಿ:- ತಾಲ್ಲೂಕಿನ ಪರತಾಬಾದ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಿತು.
ಅಧ್ಯಕ್ಷರರಾಗಿ ಶ್ರೀಮತಿ ಶರಣಮ್ಮ ಚಂದ್ರಶೇಖರ ಸಜ್ಜನ್.
ಉಪಾಧ್ಯಕ್ಷರಾಗಿ – ಯಲ್ಲಪ್ಪ ಶೆಟ್ಟೆಪ್ಪ ಮೇಳಕುಂದಿ, ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಊರಿನ ಹಿರಿಯರು ಗಣ್ಯರು ಸೇರಿದಂತೆ ಶುಭ ಕೋರಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕೇಶವ ಮೊರಟಗಿ, ಕಲಶೇಟ್ಟಿ ಸಜ್ಜನ್, ಮೈಮುದ್ ಆಂದೊಲ, ಶರಣು ಸಜ್ಜನ್, ಯಲ್ಲಯ್ಯ ಗುತ್ತೇದಾರ, ಶರಣು ಸುಬೇದಾರ, ಬಸವರಾಜ ಬೋಳಾ,ವಿಜಯಕುಮಾರ್ ನಾಸಿ,ಪ್ರಕಾಶ ಜೇವರ್ಗಿ ಹಾಗೂ ಎಲ್ಲಾ ಗ್ರಾಮ ಪಂಚಾಯತಿ ಸರ್ವ ಸದಸ್ಯರು ಉರಿನ ಮುಖಂಡರು ಸೇರಿದಂತೆ ಅನೇಕರಿದ್ದರು.