ಸುರಪುರ : ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯ ಹಣಮಂತ ದೊಡ್ಡಮನಿ ಉಮೇದುವಾರು ಸಲ್ಲಿಕೆ.

Ravikumar Badiger
1 Min Read

*ಸುರಪುರ : ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯ ಹಣಮಂತ ದೊಡ್ಡಮನಿ ಉಮೇದುವಾರು ಸಲ್ಲಿಕೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಗದ್ಗುರು ತಿಂಥಣಿ ಮೌನೇಶ್ವರ ಕ್ಷೇತ್ರದಲ್ಲಿ ತಿಂಥಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ತಿಂಥಣಿ ಗ್ರಾಮದ ಭಾರತೀಯ ಜನತಾ ಪಕ್ಷದ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯ ಹಣಮಂತ ತಂದೆ ಮಾನಪ್ಪ ದೊಡ್ಡಮನಿ ಅವರು ಇಂದು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ತೆರಳಿ ಎಸ್.ಸಿ. ಕೋಟಾದಡಿಯಿಂದ ಅಧ್ಯಕ್ಷ ಸ್ಥಾನದ ಉಮೇದುವಾರಿಕೆಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಕೆ ಮಾಡಿದರು.
ಈ ಸಂದರ್ಭದಲ್ಲಿ ತಿಂಥಣಿ ಗ್ರಾಮ ಪಂಚಾಯತ್ ನ ಸದಸ್ಯರಾದ ಮಲ್ಕಪ್ಪಗೌಡ ಲಿಂಗದಳ್ಳಿ, ಸಂಜೀವಪ್ಪ ವೈ ಕವಾಲ್ದಾರ, ಸೋಪಣ್ಣ ಶಾಂತಪೂರ್, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

*ವರದಿ : ಮೌನೇಶ ಆರ್ ಭೋಯಿ.*

Share This Article