ಘತ್ತರಗಿ ಕ್ಷೇತ್ರವನ್ನು ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಿದ ಅಭಿವೃದ್ದಿ ಆರಾದಕ ವಿಠ್ಠಲ್ ನಾಟೀಕಾರ..

Ravikumar Badiger
2 Min Read

ಘತ್ತರಗಿ ಕ್ಷೇತ್ರವನ್ನು ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಿದ ಅಭಿವೃದ್ದಿ ಆರಾದಕ ವಿಠ್ಠಲ್ ನಾಟೀಕಾರ..

ಅಫಜಲಪುರ: ತಾಲೂಕಿನ ಘತ್ತರಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಹೊಂದಿದ ಸುವರ್ಣ ಗ್ರಾಮಗಳಲ್ಲಿ ಒಂದಾಗಿದೆ. ಪ್ರಸಕ್ತ ಸಾಲಿನ ಅವಧಿಯಲ್ಲಿ ವಿಠ್ಠಲ ನಾಟೀಕಾರ ಅವರ ಅವಧಿಯಲ್ಲಿ ಈ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಹಳ್ಳಿಗಳು ಅಭಿವೃದ್ಧಿಯತ್ತ ಮುಖ ಮಾಡಿವೆ.

ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಅಂತರ್ಜಾಲ ಹೆಚ್ಚಿಸಲು ಇಂಗು ಗುಂಡಿಗಳ ನಿರ್ಮಾಣ, ಪಂಚಾಯತ ವ್ಯಾಪ್ತಿಯಲ್ಲಿ ಬರುವ ಶಾಲೆಗಳ ಅಭಿವೃದ್ಧಿ, ಶಾಲೆಗಳ ರಕ್ಷಣೆಗಾಗಿ ತಡೆಗೊಡೆ ನಿರ್ಮಾಣ, ಗ್ರಾಮ ಹಾಗೂ ಶಾಲೆಗಳಲ್ಲಿ ಹೈಟೆಕ್ ಶೌಚಾಲಯ, ಗ್ರಾಮದ ಕಲುಷಿತ ನೀರು ನದಿಗೆ ಕೂಡದಂತೆ ನೀರು ಶುದ್ದೀಕರಣ ಘಟಕಗಳ ನಿರ್ಮಾಣ, ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆ, ಗ್ರಾಮೀಣ ಸಂಪರ್ಕ ರಸ್ತೆಗಳು, ರೈತರ‌ ಜಮೀನುಗಳಿಗೆ ತೇರಳಲು ನನ್ನ ಹೋಲ ನನ್ನ ರಸ್ತೆ ಯೋಜನೆ ಅಡಿಯಲ್ಲಿ ರೈತರ ಹೋಲಗಳಿಗೆ ತೇರಳಲು ರಸ್ತೆಗಳ ನಿರ್ಮಾಣ, ರೈತರ ಹೊಲಗಳಲ್ಲಿ ನೆಡು ತೋಪುಗಳ ನಿರ್ಮಾಣ, ಹೀಗೆ ಹತ್ತು ಹಲವು ಕಾರ್ಯಗಳನ್ನು ಕೈಗೊಂಡಿರುವುದು ಗ್ರಾಮ ಪಂಚಾಯತಿಗೆ ಹೊಸ ಮೇರುಗನ್ನು ನೀಡಿದೆ.

2010 ರಲ್ಲಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾಗಿ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದ ನಾಟೀಕಾರ, ಗೆಳೆಯರೊಂದಿಗೆ ಸದಾ ಸದಾ ಅಭಿವೃದ್ಧಿ ಕುರಿತು ಚಿಂತನೆಯಲ್ಲಿ ತೊಡಗಿಕೊಂಡರು. ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ 2015 ರಲ್ಲಿ ಮತ್ತು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ವಿಠ್ಠಲ್ ನಾಟೀಕಾರ ಪತ್ನಿ ಆಯ್ಕೆಯಾದರು. 2015 ರಲ್ಲಿ ತಾಲೂಕು ಪಂಚಾಯತ ಸದಸ್ಯರಾಗಿ ಆಯ್ಕೆಯಾಗಿ, ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡರು.ತದನಂತರ 2020 ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಯಾದರು. ಸರ್ವ ಸದಸ್ಯರ ಸಮ್ಮತದ ಮೇರೆಗೆ ಘತ್ತರಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಆಯ್ಕೆಯಾದರು.

ಅಧಿಕಾರ ಸಿಕ್ಕ ದಿನದಿಂದ ಪ್ರಾರಂಭವಾದ ಇವರ ಕಾರ್ಯ ಸತತ 30 ತಿಂಗಳ ಅವಧಿಯಲ್ಲಿ ಊಹೆಗೆ ಮೀರಿದ ಕೆಲಸ ಕಾರ್ಯಗಳನ್ನು ಮಾಡಿ ಘತ್ತರಗಿ ಗ್ರಾಮ ಪಂಚಾಯತಿಯನ್ನು ಮಾದರಿ ಗ್ರಾಮ ಪಂಚಾಯತಿಯನ್ನಾಗಿ ಮಾಡಿದರು. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ತಾವು ಕಂಡ ಕನಸು ನನಸು ಮಾಡುವುದರಲ್ಲಿ ಯಶಸ್ವಿಯಾದರು. ತಾಲೂಕಿನಲ್ಲಿ 28 ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಹೊಂದಿದ ಗ್ರಾಮ ಪಂಚಾಯತಿ ಎಂದರೆ,ಅದು ಘತ್ತರಗಿ ಗ್ರಾಮ ಪಂಚಾಯತಿ ಆಗಿ ಹೊರಹೊಮ್ಮಿದೆ. ತಾಲೂಕಿನ ಯಾವ ಹಳ್ಳಿಗಳಲ್ಲಿಯೂ ಆಗದ ಅಭಿವೃದ್ಧಿಯನ್ನು ವಿಠ್ಠಲ್ ನಾಟೀಕಾರ ಮಾಡಿ ಎಲ್ಲಾ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳಲ್ಲಿ ಊಹಿಸಲಾಗಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನರ ಪ್ರಶಂಸೆಗೆ ಪಾತ್ರರಾದರು.

Share This Article