ನಿತೀನ್ ಗುತ್ತೇದಾರ ಬೆಂಬಲಿತ ಅಭ್ಯರ್ಥಿಗಳಿಗೆ ಒಲಿದ ಅತನೂರ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ.

Ravikumar Badiger
1 Min Read
  • ನಿತೀನ್ ಗುತ್ತೇದಾರ ಬೆಂಬಲಿತ ಅಭ್ಯರ್ಥಿಗಳಿಗೆ ಒಲಿದ ಅತನೂರ ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ.

ಅಫಜಲಪುರ ತಾಲೂಕಿನ ಅತನೂರ ಗ್ರಾಮ ಪಂಚಾಯತಿ ಎರಡನೇ ಅವಧಿಯ ಚುನಾವಣೆಯಲ್ಲಿ
ಅಧ್ಯಕ್ಷೆಯಾಗಿ ಸಂಗೀತಾ ನಾಗೇಶ ಕಾಂಬ್ಳೆ ಉಪಾಧ್ಯಕ್ಷರು ಬಿಸ್ಮಿಲ್ಲಾ ಅಯುಬ್ ಪಟೇಲ್ ಆಯ್ಕೆಯಾದರು.

ನಂತರ ಮಾತನಾಡಿದ ನೂತನ ಅಧ್ಯಕ್ಷ ಸಂಗೀತಾ ಕಾಂಬ್ಳೆ, ನಮ್ಮ ನಾಯಕರಾದ ನಿತೀನ್ ಗುತ್ತೇದಾರ ಅವರ ಸಹಕಾರದಿಂದ ನನಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಗ್ರಾಮದ ಸರ್ವೋತ ಕೆಲಸಗಳಿಗಾಗಿ ಶ್ರಮಿಸುವೆ ಎಂದರು. ಅದಲ್ಲದೇ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಗ್ರಾಮದ ಯಾವುದೇ ಕೆಲಸಗಳಿಗೆ ಅಡತಡೆಗಳಾಗದಂತೆ ನೋಡಿಕೊಳ್ಳುತ್ತೆನೆ ಎಂದರು.

ನಂತರ ಮಾತನಾಡಿದ ನಿತೀನ್ ಗುತ್ತೇದಾರ ಬೆಂಬಲಿಗ ನಾಗೇಶ ಕಾಂಬ್ಳೆ, ಗ್ರಾಮದ ಸರ್ವತೋಮುಖ ಪ್ರಗತಿಗಾಗಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗಾಗಿ ಶ್ರಮಿಸುವ ವಿಶ್ವಾಸ ನಮ್ಮ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಉಪಾಧ್ಯಕ್ಷರ ಮೇಲೆ ಇದೆ ಎಂದರು.

ಇದೆ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ,
ಪ್ರವೀಣ ಗುತ್ತೇದಾರ,
ಪುಟ್ಟು ಗುತ್ತೇದಾರ, ಜಗನಾಥ ಗೊಳಸಾರ, ಮಡಿವಾಳಪ್ಪ ಗೊಳಸಾರ,ಕಲ್ಯಾಣ ದೇವಣಗಾಂವ, ಗುರುಗೌಡ ಪಾಟೀಲ,ಸಂಗು ಗೊಳಸಾರ, ಮಹಾಂತೇಶ ಬಳೂಂಡಗಿ, ರಾಜು ಆರೇಕಾರ, ಭಗವಂತ ವಗ್ಗೆ, ಸಂತೋಷ ಸಿಂಗೆ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Share This Article