ಆಲಮಟ್ಟಿ ಎಡದಂಡೆ ಕಾಲುವೆ ಒಡೆದು ಆವಾಂತರ.

Ravikumar Badiger
1 Min Read

ವಿಜಯಪುರ ನಗರ ನ್ಯೂಸ್

ಆಲಮಟ್ಟಿ ಎಡದಂಡೆ ಕಾಲುವೆ ಒಡೆದು ಆವಾಂತರ

ಉತ್ತರ ಕರ್ನಾಟಕ ಜೀವನದಿ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆ ಒಡೆದು ಅವಾಂತರ ನಡೆದಿದೆ. ಜಮೀನಿಗೆ ಅಪಾರ ಪ್ರಮಾಣದ ಕಾಲುವೆಯ ನೀರು ನುಗ್ಗಿದ ಪರಿಣಾಮ 200 ಎಕರೆಗೂ ಹೆಚ್ಚಿನ ಪ್ರಮಾಣದ ಜಮೀನು ಜಲಾವೃತಗೊಂಡಿದೆ.

ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳಿಗೆ ಹಾನಿಯಾಗಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹರಿಂದ್ರಾಳ ಗ್ರಾಮದ ಬಳಿ ಘಟನೆ ನಡೆದಿದ್ದು ಸ್ಥಳಕ್ಕೆ ಕೆಬಿಜೆಎನ್ಎಲ್ ಆಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಾಲುವೆ ಒಡೆದ ಸ್ಥಳದಲ್ಲಿ ಜೆಸಿಬಿ ಮೂಲಕ ಮಣ್ಣು ಹಾಕಿ ಮುಚ್ಚಲು ವಿಫಲ ಯತ್ನ ನಡೆಸಿದರು. ಕಳಪೆ ಕಾಮಗಾರಿ ಕಾಲುವೆ ಒಡೆಯಲು ಕಾರಣವೆಂದು ಸ್ಥಳಿಯರ ಆರೋಪಿಸಿದರು. ಕಾಲುವೆ ದುರಸ್ಥಿ ಮಾಡಬೇಕು, ಜಮೀನಿಗೆ ನೀರು ನುಗ್ಗಿ ಹಾಳಾದ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ವರದಿ:ವಿದ್ಯಾಧರ ಪಾಟೀಲ
RV ಟಿವಿ ಕನ್ನಡ ನ್ಯೂಸ್ ವಿಜಯಪುರ ನಗರ

Share This Article