ವರದಿ ಅಥಣಿ
*ಮಲೇರಿಯಾ ಮತ್ತು ಸಾಂಕ್ರಾಮಿಕ ರೋಗ ನಿರ್ಮೂಲನ ಆಂದೋಲನ.
ಅಥಣಿ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಂಯೋಗದಲ್ಲಿ ಅಥಣಿ ನಗರದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ 103ರಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದಕ್ಕೆ ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳಿಗೆ ಸೊಳ್ಳೆಯಿಂದ ಹರಡುಬಹುದಾದ ರೋಗಗಳಾದ ಮಲೇರಿಯಾ ಡೆಂಗು ಚಿಕನ್ ಗುನ್ಯಾ ಆನೆಕಾಲು ರೋಗ ಮುಂತಾದ ಕಾಯಿಲೆಗಳ ಬಗ್ಗೆ ಅರಿವು ಮೂಡಿಸಿ ರೋಗಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಚಿತ್ರ ಕಲೆಯ ಮೂಲಕ ಪ್ರದರ್ಶನ ಮಾಡಿದರು.
ಈ ಸಂದರ್ಭದಲ್ಲಿ
ತಾಲೂಕ ಆರೋಗ್ಯ ಅಧಿಕಾರಿಯಾದ ಬಸಗೌಡ ಕಾಗೆ ತಾಲೂಕ ಆರೋಗ್ಯ ನಿರಕ್ಷಣಾಧಿಕಾರಿಯಾದ ಪ್ರಭು ದೊಡ್ಡಮನಿ ಹಾಗೂ N.A ಗೊಟ್ಯಾಲ ಹಾಗೂ ಶಾಲೆಯ ಮುಖ್ಯ ಗುರುಗಳು ಮತ್ತು ಶಾಲೆಯಲ್ಲ ಸಹ ಶಿಕ್ಷಕರು ಭಾಗಿಯಾಗಿದ್ದರು.
*ವರದಿ.. ರಮೇಶ ಕಾಂಬಳೆ ಕನ್ನಡ ಟುಡೇ ನ್ಯೂಸ್ ರಿಪೋರ್ಟರ್ ಚಿಕ್ಕೋಡಿ **