Ravikumar Badiger
2 Min Read

 

ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಸಚಿವ ಲಕ್ಷ್ಮಣ ಸವದಿ ಭಾಷಣ.

ಸಿಎಂ ಹಾಗೂ ಡಿಸಿಎಂ ಬಳಿ ನಾನು ಏನು ಕೇಳಬೇಕು ಏನು ಕೇಳಬಾರದು ಅನ್ನೋ ಗೊಂದಲದಲ್ಲಿದ್ದೇನೆ.
ನಾನು ಕೇಳುವ ಮೊದಲೇ ಅವರು ಎಲ್ಲವನ್ನು ಕೊಡ್ತಾರೆ ಅನ್ನೋ ಭಾವ ಅವರ ಮುಖದಲ್ಲಿ ಕಾಣ್ತಿದೆ.
ಸಿಎಂ, ಡಿಸಿಎಂ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗಂಡು ಮೆಟ್ಟಿದ ನಾಡು ಬೆಳಗಾವಿಗೆ ಆಗಮಿಸಿದ್ದಾರೆ.
ಸಿಎಂ, ಡಿಸಿಎಂ ಅವರಲ್ಲಿ ಶಾಸಕ ಲಕ್ಷ್ಮಣ ಸವದಿ ವೇದಿಕೆ ಮೇಲೆಯೇ ಬೇಡಿಕೆ.
ಅಥಣಿ ಭಾಗದಲ್ಲಿ ನೀರಾವರಿ ಯೋಜನೆಗೆ ಅನುದಾನ ಒದಗಿಸಿಕೊಡಬೇಕು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅನೇಕ ವಾಗ್ದಾನ ನೀಡಿದ್ರು.
*ಆದ್ರೆ ಅವರು ಕುಂಟುತ್ತಾ ಮನೆಗೆ ನಡೆದ್ರು.*
ಅಂಗನವಾಡಿ ಮಕ್ಕಳಿಗೆ ಪಷ್ಟಿಕ ಆಹಾರಕ್ಕೆ ಒಣ ದ್ರಾಕ್ಷಿ ಸರ್ಕಾರಿ ಮಟ್ಟದಲ್ಲಿ ಖರೀದಿಗೆ ಮನವಿ
ಒಣದ್ರಾಕ್ಷಿಗೆ ಕೇಂದ್ರ ಸರ್ಕಾರದಿಂದ ಬೆಂಬಲ ಬೆಲೆ ಒದಗಿಸಿ ಕೊಡುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ.
ಬರಗಾಲದ ಪ್ರದೇಶದಲ್ಲಿರೋ ರೈತರಿಗೆ ಶಕ್ತಿ ತುಂಬಿದಂತಾಗುತ್ತದೆ.

ಅಪಡೇಟ್… ಕಾಗವಾಡ ಶಾಸಕ ರಾಜು ಕಾಗೆ ಸ್ಪೀಚ್

ಕಾಗವಾಡ ತಾಲೂಕಿಗೆ ಸರ್ಕಾರಿ ಕಚೇರಿ ಇಲ್ಲ.. ತ್ವರಿತ ಗತಿಯಲ್ಲಿ ಮಾಡಬೇಕು
ಕಾಗವಾಡ ಮತಕ್ಷೇತ್ರ ಸಂಪೂರ್ಣ ಬರಗಾಲ ಇದೆ
ಮಳೆ -9 ಕಿಂತ ಕಡಿಮೆ ಇದೆ
ಕಾಗವಾಡ ವಿಧಾನ ಸಭಾ ಕ್ಷೇತ್ರದ ಅನಂತಪುರ ಹಾಗೂ ಮಧಭಾವಿ ಎರಡು ಹೂಬಳಿ ಗಳನ್ನ ಬರಗಾಲ ಪ್ರದೇಶ ಘೋಷಣೆ ಆಗ್ರಹ
ನಂದಿಯಿಂದ ಕೃಷಿ ಕಾರ್ಯಕಾಗಿ ಬಂದ ಖಾಸಗಿ ಯೋಜನೆಗೂ ವಿದ್ಯುತ್ ಬಿಲ್ಲ ಉಚಿತ ನೀಡುವಂತೆ ಮನವಿ
ಬಸವೇಶ್ವರ ಏತ ನೀರಾವರಿಗೆ ಹೆಚ್ಚಿನ ಒತ್ತು ನೀಡಬೇಕು

ಸಚಿವ ಸತೀಶ್ ಜಾರಖಿಹೋಳಿ.. ಸ್ಪೀಚ್ ಅಪಡೇಟ್
ಅಥಣಿಯಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆ ಆಗುತ್ತಿರುವುದು ಖುಷಿಯ ಸಂಗತಿ

ಮುಂದಿನ ದಿನಗಲ್ಲಿ ವಿದ್ಯಾಲಯಕ್ಕೆ ತಕ್ಕ ಹಾಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ್ಳನ್ನ ಹೊರಹೋಮ್ಮವಂತ ಕೆಲಸಕ್ಕೆ ಅಭಿನಂದನೆ

ಇದರ ಜೊತೆಗೆ ಅಥಣಿಯಲ್ಲಿ ಇನ್ನು ಬಹಳಷ್ಟು ಕೆಲಸ ಕಾರ್ಯಗಳು ಆಗಬೇಕಿದೆ ಅದಕ್ಕೂ ಸಚಿವರು ಭರವಸೆ ನೀಡಿದ್ದಾರೆ

ಮೊನ್ನೆ ನಡೆದಂತ ಬೆಳಗಾವಿ ಜೋಲ್ಲಾ ಸಭೆಯಲ್ಲಿ ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ನಾಲ್ಕು ಟಿಎಂಸಿ ನೀರು ಬಿಡಬೇಕು

ಇದರಿಂದ ಗಡಿ ರೈತರಿಗೆ ಅನುಕೂಲವಾಗಲಿದೆ ಆದಷ್ಟು ಬೇಗ ಅನುಷ್ಠಾನಕ್ಕೆ ತರುವ ಸಿದ್ಧತೆ ನಡೆದಿದೆ! ಸಚಿವ ಸತೀಶ ಜಾರಖಿಹೋಳಿ

ಚಿಕ್ಕೋಡಿ ಬ್ರೇಕಿಂಗ್…

ಉದ್ಘಾಟನೆ ಸಮಾರಂಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಷಣ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಸಿದ್ದರಾಮಯ್ಯ ಬೆಳಗಾವಿಗೆ ಮೊದಲ ಬಾರಿಗೆ ಆಗಮಿಸಿದ್ದಾರೆ.
ಅಥಣಿ ಜನತೆಗೆ ಅಭಿನಂದನೆ ಹಾಗೂ ಧನ್ಯವಾದ ತಿಳಿಸುತ್ತೇನೆ.
ಚುನಾವಣೆ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಹಾಗೂ ಅಥಣಿ ಕ್ಷೇತ್ರದ ಬಗ್ಗೆ ಬಹಳಷ್ಟು ಕುತೂಹಲ ಇತ್ತು.
ಹೀಗಾಗಿ ನಿಮ್ಮೆಲರ ಆರ್ಶೀವಾದದಿಂದ ಗೆಲುವು ಸಾಧಿಸಲು ಸಾಧ್ಯವಾಗಿದೆ.
ಲಕ್ಷ್ಮಣ ಸವದಿ ಬಿಜೆಪಿಯಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸದವರಾಗಿದ್ದರು.
ಆದ್ರೆ ನಮ್ಮ ಪಕ್ಷಕ್ಕೆ ಬರಬೇಕಾದ್ರೆ ಅವರು ಕೇಳಿದ್ದು ಅಥಣಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿ ಎಂದು.
ಬಹಳಷ್ಟು ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ನೀಡಿತ್ತು.
ಈಗಾಗಲೇ ಮೂರು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯನ್ನು ಬೆಳಗಾಬಿಯಿಂದಲೇ ಚಾಲನೆ ನೀಡಲಿದ್ದೇವೆ.
ಬೆಳಗಾವಿ ಜಿಲ್ಲೆಯಲ್ಲಿ 11 ಲಕ್ಷ 80 ಸಾವಿರ ಫಲಾನುಭವಿಗಳಿದ್ದಾರೆ.
ಮುಂದಿ‌ನ ದಿನಗಳಲ್ಲಿ ಬೆಳಗಾವಿ ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿಯಾಗಲಿದೆ.

*ವರದಿ.. ರಮೇಶ ಕಾಂಬಳೆ ಕನ್ನಡ ಟುಡೇ ನ್ಯೂಸ್ ಬೆಳಗಾವಿ ಹಾಗೂ ಚಿಕ್ಕೋಡಿ ಜಿಲ್ಲಾ **

Share This Article