ದಲಿತ ಸೇನೆ ರಾಜ್ಯಾಧ್ಯಕ್ಷರಾದ ಹಣಮಂತ ಜಿ ಯಳಸಂಗಿ ಇವರ ಆದೇಶದ ಮೇರೆಗೆ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಭಂಢಾರಿ ಸೂಚನೆಯ ಮೇರೆಗೆ ಇಂದು ಅಫಜಲಪೂರ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ದಲಿತ ಸೇನೆಯ ಅಫಜಲಪೂರ ತಾಲ್ಲೂಕು ಅಧ್ಯಕ್ಷರಾದ ಮಾಂತು ಬಳೂಂಡಗಿ ಅವರ ನೇತೃತ್ವದಲ್ಲಿ ಇಂದು ತಾಲ್ಲೂಕು ದಲಿತ ಸೇನೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಉಪಾಧ್ಯಕ್ಷರ ನೇಮಕ ಹಾಗೂ ಕರಜಗಿ ವಲಯದ ಅಧ್ಯಕ್ಷರ ನೇಮಕ ನಡೆಯಿತು.
ದಲಿತ ಸೇನೆಯ ಜಿಲ್ಲಾ ಉಪಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷರಾದ ಮಹಾಂತೇಶ್ ಬಳುಂಡಗಿ ಇವರ ಮೇರೆಗೆ ವಿದ್ಯಾರ್ಥಿ ಒಕ್ಕೂಟದ ತಾಲೂಕು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ಕರ್ಜಗಿ ವಲಯ ಅಧ್ಯಕ್ಷ ಸ್ಥಾನಗಳು ನೇಮಕ ಮಾಡಲಾಯಿತು
1) ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಸುಧಾಕರ್ ಹುಣಸಿನ್ ಹಡಗಿಲ್
2) ಉಪಾಧ್ಯಕ್ಷರನ್ನಾಗಿ ಅರುಣ್ ದೊಡ್ಮನಿ
3) ಕರ್ಜಗಿ ವಲಯ ಅಧ್ಯಕ್ಷರನ್ನಾಗಿ ಮಡಿವಾಳ ಮೇಲಕೆರಿ ಆಯ್ಕೆ ಮಾಡಲಾಯಿತು.
ಇದೆ ಸಂದರ್ಭದಲ್ಲಿ ಚಿದಾನಂದ ಗುಡ್ಡಡಗಿ, ಚಿದಾನಂದ ಬಿಜಾಪುರ, ಮತ್ತಿರರು ಉಪಸ್ಥಿತರಿದ್ದರು.