ಚಡಚಣ ನ್ಯೂಸ್,
ಫೋಟೋ- ಶಿರನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯೋತ್ಸವದ ಧ್ವಜರೋಹಣವನ್ನು ಎಸ್ಡಿಎಂಸಿ ಅಧ್ಯಕ್ಷ ಹಸನ್ ಮಕನಾದರ ಮತ್ತು ತಾಪಂ ಮಾಜಿ ಸದಸ್ಯ ಭೀಮನಗೌಡ ಬಿರಾದಾರ ನೇರವೇರಿಸಿದರು.
ಯುವಕರು ಉತ್ತಮ ಭವಿಷ್ಯ ಕಂಡುಕೊಳ್ಳಿ: ಹಸನ್
15 ಧೂಳಖೇಡ 01 : ಚಡಚಣ ತಾಲೂಕಿನ ಶಿರನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಹಸನ್ ಮಕನಾದರ ವಹಿಸಿ, ಧ್ವಜರೋಹಣ ನೇರವೇರಿಸಿ ಮಾತನಾಡಿ, 77 ನೇ ಸ್ವಾತಂತ್ರ್ಯ ದಿನದಂದು ನಮ್ಮೆಲ್ಲರಿಗೆ ಒಂದು ಹೆಮ್ಮೆಯ ದಿನ ನಮಗೆ ಮತ್ತು ದೇಶಕ್ಕೆ ಸ್ವತಂತ್ರ ದೊರಕಿದ ದಿನ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿ, ಬಾಲಗಂಗಾಧರ ತಿಲಕ, ಚಂದ್ರಶೇಖರ ಅಜಾಧ್. ಭಗತಸಿಂಗ್, ಡಾ, ಬಿ ಆರ್ ಅಂಬೇಡ್ಕರ ಇನ್ನೂ ಹಲವಾರು ಮಹಾನ ನಾಯಕರು ದೇಶದ ಸಲುವಾಗಿ ಹೋರಾಡಿ ತಮ್ಮ ಪ್ರಾಣವನ್ನೆ ಲೆಕ್ಕಿಸದೇ ನಮಗೆ ಸ್ವಾತಂತ್ರ ತಂದು ಕೊಟ್ಟರು. ಯುವಕರು ಸದೃಡ ದೇಶಕ್ಕಾಗಿ ಉತ್ತಮ ಭವಿಷ್ಯ ಕಂಡಕೊಳ್ಳಬೇಕು ಎಂದರು.
ಕಾರ್ಯಕ್ರದ ಮುಖ್ಯ ಅಥಿತಿಯಾಗಿ ತಾಪಂ ಮಾಜಿ ಸದಸ್ಯ ಭೀಮನಗೌಡ ಬಿರಾದಾರ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯ ಸಲುವಾಗಿ ಅನೇಕ ನಾಯಕರ ತ್ಯಾಗ ಬಿಲಿದಾನದಿಂದ ನಮಗೆ ಸ್ವಾತಂತ್ರ್ಯ ದೂರಕಿದೆ. ನಾವು ದೇಶದ ಸಲುವಾಗಿ ದುಡಿಯೊಣ್ಣ ಸುಭದ್ರ ದೇಶ ಕಟ್ಟೋಣ ಎಂದರು.
ಮೆಚ್ಚುಗೆ ಗಳಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು : ಶಾಲಾ ವಿದ್ಯಾರ್ಥಿಗಳಿಂದ ಜನಪದ ನೃತ್ಯ, ದೇಶ ಭಕ್ತಿ ಗೀತೆಗಳು, ನಾಟಕ, ಮತ್ತು ಭಾಷಣ ಹೀಗೆ ವಿವಿಧ ಕಾರ್ಯಕ್ರಮಗಳು ಗ್ರಾಮಸ್ಥರಲ್ಲಿ ಗಮನ ಸೆಳೆಯುವ ಮೂಲಕ ಮೆಚ್ಚುಗೆ ಗಳಿಸಿದವು.
ಈ ಸಂದರ್ಭದಲ್ಲಿ ನಿವೃತ ಶಿಕ್ಷಣ ಸಂಯೋಜಕ ಪುಂಡಲಿಕ ಶಿವಶರಣ, ವಿಶ್ವನಾಥ ರೇವತಗಾಂವ, ಸೈನಿಕ ನಿತೀಶ ಸಂಕಫಳ, ಶಿವಾನಂದ ರೇವತಗಾಂವ, ರಾಘವೇಂದ್ರ ವಾಲಿಕಾರ, ಬಾಳುಗೌಡ ಬಿರಾದಾರ, ಸತೀಶ ಯಲಗೊಂಡ, ಸದಾಶಿವ ಹಳ್ಳಿ, ಸುರೇಶ ಕಾಮಾಟೆ, ಪ್ರಕಾಶ ಇರಸೂರ, ಸುರೇಶ ಹಳ್ಳಿ, ಎಂ ಬಿ ವಾಲಿಕಾರ, ಆರ್ ಕ್ ಧೂಳಖೇಡ, ಎಸ್ ಎಂ ಶಿವಶರಣ, ಮನೋಜ ಕೋಳಿ, ವ್ಹಿ ಆರ್ ಮಿಸಾಳೆ, ಪ್ರತಿಪರಾಜ ಜೆಜೆ, ಕೆ ಬೇಗಾಂ, ಎಸ್ ಬಿ ಬಿರಾದಾರ. ಜಯಶ್ರೀ ಪೂಜಾರಿ ಅಸ್ವಿನಿ ತಳವಾರ, ದೇವಕಿ ಶಿವಶರಣ ಮತ್ತು ಗ್ರಾಮಸ್ಥರು ಇದ್ದರು
ವರದಿ:ಉಮೇಶಗೌಡ ಹಿಂಗಣಿ
RV ಟಿವಿ ಕನ್ನಡ ನ್ಯೂಸ್ ಚಡಚಣ