ಬಡವರ ಸೇವೆಗೆ ಬದಕು ಮುಡಿಪಾಗಿಟ್ಟ ಮದರ್ ತೆರೇಸಾ’:- ಕೃಷ್ಣ ಕುಂಬಾರ.
ಅಫಜಲಪುರ:- ಅನಾಥರು, ಬಡವರು, ನಿರ್ಗತಿಕರ ಸೇವೆಯಲ್ಲಿಯೇ ಬದುಕಿನ ಪ್ರೀತಿಯನ್ನು ಕಂಡ ಮಹಾನ್ ಚೇತನ ಮದರ್ ತೆರೇಸಾ. ಇಂದು ಇಂತಹ ಮಾತೃ ಹೃದಯಿ ಮದರ್ ತೆರೇಸಾ ಅವರ 112ನೇ ಜನ್ಮ ಜಯಂತಿಯನ್ನು ಆಚರಿಸುತ್ತಿದ್ದೆವೆ ಎಂದು ಪಟ್ಟಣದ
ಮದರ್ ತೆರೆಸಾ ಸ್ವತಂತ್ರ ಪದವಿ ಪೂರ್ವ ಕಲಾ ಮಹಾವಿದ್ಯಾಲಯ ಕಾಲೇಜಿನಲ್ಲಿ ಆಯೋಜಿಸಿದ ಜನ್ಮ ದಿನದ ಅಂಗವಾಗಿ ಕಾಲೇಜಿನ ಪ್ರಾಚಾರ್ಯರಾದ ಕೃಷ್ಣ ಕುಂಬಾರ ಅವರು ಮಾತನಾಡಿ ತಿಳಿಸಿದರು.
ಇದಲ್ಲದೆ ಕಾಲೇಜಿನ ಉಪನ್ಯಾಸಕರಾದ ಯಲ್ಲಾಲಿಂಗ ಪ್ಯಾಟಿ ಹಾಗೂ ರವಿಕುಮಾರ್ ಬಡಿಗೇರ ಅವರು ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಕೃಷ್ಣ ಕುಂಬಾರ,ಅರುಣಕುಮಾರ್ ರಾಠೋಡ,ರವಿ ಬಡಿಗೇರ ಯಲ್ಲಾಲಿಂಗ ಪ್ಯಾಟಿ, ಶಿವಾನಂದ ಜಮಾದಾರ, ಪ್ರಮೋದ ಗುತ್ತೇದಾರ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.