ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕ ಕಲ್ಬುರ್ಗಿ
ಇಂದು ದಿನಾಂಕ 30_8_ 2023 ಸಾಯಂಕಾಲ 7:30 ನಿಮಿಷಕ್ಕೆ ಸಂತ್ರಸ್ವಾಡಿಯ ಶ್ರೀ ಕಾಳಿಕಾದೇವಿ ಮಂದಿರದಲ್ಲಿ, ದಿನಾಂಕ್ 17 ಸೆಪ್ಟೆಂಬರ್ 2023 ರಂದು ನಡೆಯಲಿರುವ ಶ್ರೀ ವಿರಾಟ ವಿಶ್ವಕರ್ಮ ಜಯಂತೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.
ಈ ಸಭೆಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಡಾ. ವೀರೇಶ್ ಬಡಿಗೇರ್ ನಿವೃತ್ತ ಮುಖ್ಯಸ್ಥರು ಇಂಗ್ಲೀಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಗುಲ್ಬರ್ಗ ವಿಶ್ವವಿದ್ಯಾನಿಲಯ ಕಲ್ಬುರ್ಗಿ ಇವರನ್ನು ಆಯ್ಕೆ ಮಾಡಲಾಯಿತು.
ಉಪನ್ಯಾಸಕರನ್ನಾಗಿ ಶ್ರೀ ಗುರುಮೂರ್ತಿ ಆರ್ ಬಡಿಗೇರ್ ನಿವೃತ್ತ ಪ್ರಾಚಾರ್ಯರು ಮರಗೋಳ ಪದವಿ ಕಾಲೇಜು ಶಹಾಬಾದ್ ಇವರನ್ನು ಆಯ್ಕೆ ಮಾಡಲಾಯಿತು.
ಈ ಸಭೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಲೋಹಿತ್ ವಾಯ್ ಕಲ್ಲೂರ ವಿಶ್ವಕರ್ಮ ಹಾಗೂ ಗೌರವಾಧ್ಯಕ್ಷರಾದ ಶ್ರೀ ರಾಮಚಂದ್ರ ವಿಶ್ವಕರ್ಮ ಜಿಲ್ಲಾ ಅಧ್ಯಕ್ಷ ಶ್ರೀ ಕಮಲಾಕರ್ ಅಣಕಲ್, ಮರಗೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ಹನುಮಂತರಾಯ ವಿಶ್ವಕರ್ಮ, ಮಾಜಿ ಅಧ್ಯಕ್ಷರ ಶ್ರೀ ಅಶೋಕ್ ಪೊದ್ದಾರ್ ಹಾಗೂ ಪ್ರಧಾನ ಕಾರ್ಯದರ್ಶಿಗಳು ಉಪಾಧ್ಯಕ್ಷರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.