ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತೋತ್ಸವ ಆಚರಣೆ.

Ravikumar Badiger
1 Min Read

ಅಫ್ಜಲ್ಪುರ ತಾಲೂಕ ಆಡಳಿತದ ವತಿಯಿಂದ ಇಂದು ತಹಶಿಲ್ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಫೋಟೋ ಪೂಜೆ ನೆರವೇರಿಸಿ ತಾಲೂಕ ದಂಡಾಧಿಕಾರಿಗಳಾದ ಸಂಜುಕುಮಾರ್ ದಾಸರವರು ಮಾತನಾಡಿ ಸಮಾಜದಲ್ಲಿ ಸಮಾನತೆಗಾಗಿ 19ಮತ್ತು20ನೇ ಶತಮಾನದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿ ಸಮ ಸಮಾಜದ ನಿರ್ಮಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳು ದುಡಿದಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಈಡಿಗ ಸಮಾಜದ ಮುಖಂಡರಾದ ಉಮೇಶ್ ಗುತ್ತೇದಾರ್ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನವೇ ಇಂದಿನ ಬದುಕಿಗೆ ದಿಗ್ದರ್ಶನವಾಗಿದೆ ಎಂದು ಹೇಳುತ್ತಾ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಹೇಳಿ ನಾರಾಯಣ ಗುರುಗಳು ಕೇರಳದಲ್ಲಿ ಅಸ್ಪೃಶ್ಯತೆ ಸಾಮಾಜಿಕ ಸಮಾನತೆ ಹಾಗೂ ಶಿಕ್ಷಣಕಾಗಿ ಹೋರಾಟವನ್ನು ಮಾಡಿದರು ಅನೇಕ ದೇವಾಲಯಗಳನ್ನು ನಿರ್ಮಿಸಿ ದೇವಾಲಯ ಪ್ರವೇಶವನ್ನು ಎಲ್ಲರಿಗೂ ಮುಕ್ತಗೊಳಿಸಿದರು ಅನೇಕ ದೇವಾಲಯಗಳಲ್ಲಿ ಗ್ರಂಥಾಲಯಗಳ ನಿರ್ಮಾಣ ಮಾಡಿ ಜ್ಞಾನದ ದೇವಿಗೆಯನ್ನು ಹಚ್ಚಿದರು ಅದೇ ರೀತಿ ಕೆಲವು ದೇವಸ್ಥಾನಗಳಲ್ಲಿ ಕೇವಲ ಕನ್ನಡಿಯನ್ನು ಸ್ಥಾಪನೆ ಮಾಡಿ ಪ್ರತಿ ಮನುಷ್ಯನ ಅಂತರಂಗ ಅರಿಯಲು ಮಾರ್ಗದರ್ಶನವನ್ನು ಮಾಡಿದರು ಅದೇ ರೀತಿಯಾಗಿ ಇಂದು ಹಿಂದೂ ಧರ್ಮ ಉಳಿಯಲು ಬೆಳೆಯಲು ಹಾಗೂ ಸಾಮಾಜಿಕ ಸಮಾನತೆ ವಿರುದ್ಧ ಅನೇಕ ಜನರು ಹೋರಾಡಲು ಪ್ರೇರಣೆಯನ್ನು ನೀಡಿರುವುದೇ ನಾರಾಯಣ ಗುರುಗಳು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಈಡಿಗ ಸಮಾಜದ ಅಧ್ಯಕ್ಷರಾದ ಹಣಮಯ್ಯ ಗುತ್ತೇದಾರ್ ಬಳೂರಗಿ ಹಾಗೂ ಶಿವಯ್ಯ ಗುತ್ತೇದಾರ್, ಹಣಮಯ್ಯ ಗುತ್ತೇದಾರ್ ಬಡದಾಳ ಸಿದ್ದಯ್ಯ ಗುತ್ತೇದಾರ್ ಚಿಂಚೋಳಿ ಇತರರು ಭಾಗವಹಿಸಿದ್ದರು.

Share This Article